ADVERTISEMENT

ಮುಳಗುಂದ: ಈದ್ ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:51 IST
Last Updated 6 ಸೆಪ್ಟೆಂಬರ್ 2025, 4:51 IST
ಮುಳಗುಂದಲ್ಲಿ ಈದ್ ಮಿಲಾದ್ ಆಚರಣೆ ಅಂಗವಾಗಿ ಸವಳಭಾವಿ ಓಣಿಯ ಆಝಾದ ಮಸೀದಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಮೊಹಮ್ಮದ ಪೈಗಂಬರರ ಸ್ಮರಣೆ ನಡೆಯಿತು.
ಮುಳಗುಂದಲ್ಲಿ ಈದ್ ಮಿಲಾದ್ ಆಚರಣೆ ಅಂಗವಾಗಿ ಸವಳಭಾವಿ ಓಣಿಯ ಆಝಾದ ಮಸೀದಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಮೊಹಮ್ಮದ ಪೈಗಂಬರರ ಸ್ಮರಣೆ ನಡೆಯಿತು.   

ಮುಳಗುಂದ: ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಶುಕ್ರವಾರ ಮೆಕ್ಕಾ ಮದೀನಾ ಭಾವಚಿತ್ರದ ಮೆರವಣಿಗೆ ನಡೆಯಿತು.

ಅಂಜುಮನ್ ಶಾದಿ ಮಹಲ್ ಆವರಣದಿಂದ ಹೊರಟ ಮೆರವಣಿಗೆ ಮೊಹಮ್ಮದ ಪೈಗಂಬರರ ಸ್ಮರಣೆಯೊಂದಿಗೆ ಮುಸ್ಲಿಮ್ ಸಮುದಾಯದವರು ಸಂಗನಪೇಟಿ, ಕೋಟಿ ಓಣಿ, ಚಿಂದಿಪೇಟಿ, ಮಳಗಿ ಮಸೀದಿ, ನದಾಪ್ ಗಲ್ಲಿ, ದಾವಲ್ ಮಲ್ಲಿಕ್ ಪವಾಡ, ಶೇಖ ಓಣಿಯ ಮಾರ್ಗವಾಗಿ ಪ್ರಾರ್ಥನೆ, ಪ್ರಭಾತಪೇರಿ ಮೂಲಕ ಎಲ್ಲ ಮಸೀದಿಗಳಿಗೆ ಸಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.

ಮೆರವಣಿಗೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ತಾಜ್ಜುದ್ದಿನ ಕಿಂಡ್ರಿ, ಎ.ಡಿ.ಮುಜಾವರ,ಇಮಾಮಸಾಬ ಶೇಖ,ಆರ್.ಎಚ್.ದಲೀಲ,ದಾವುದ ಜಮಾಲಸಾಬನವರ,ಲಾಲಷಾಪೀರ ಮಕಾಂದಾರ, ಇಸ್ಮಾಯಿಲ್ ಖಾಜಿ, ಮಸೀದಿಗಳ ಮೌಲ್ವಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಮುಳಗುಂದ  ಸಮೀಪದ ಚಿಂಚಲಿ ಗ್ರಾಮದಲ್ಲಿ ಈದ್ ಮಿಲಾದ್ ಆಚರಣೆ ಮೊಹಮ್ಮದ ಪೈಗಂಬರರ 1500 ನೇ ಜಯಂತೋತ್ಸವ ಅಂಗವಾಗಿ ಕುರಾನ್ ಅಭ್ಯಾಸ ಹಾಗೂ ಎಸ್.ಎಸ್.ಎಲ್.ಸಿ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಧರ್ಮಗುರು ಉಮರ್ ಸದಿ ಬಾಳೆಪುಣೆ ಹಾಗೂ ಸಮುದಾಯದ ಮುಖಂಡರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.