ಗದಗ: ‘ಜಿಲ್ಲೆಯಲ್ಲೇ ಉತ್ಪಾದನೆ ಆಗುವ ವಸ್ತುಗಳನ್ನು ಖರೀದಿಸಿ, ಉಪಯೋಗಿಸುವ ಮೂಲಕ ಗದಗ ವ್ಯಾಪಾರಸ್ಥರನ್ನು ಬೆಳೆಸಲು ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.
ಗದಗ ಜಿಲ್ಲೆಯಾಗಿ 28 ವರ್ಷಗಳನ್ನು ಪೂರೈಸಿದ ಅಂಗವಾಗಿ ನಗರದ ಕೆಫೆ-26 ಶಾಪ್‍ನಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳಸಾಪೂರ ಬಸವಕೇಂದ್ರದ ಕಾರ್ಯಾಧ್ಯಕ್ಷ, ಕನ್ನಡ ಅಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರ ಅತಿಥಿಯಾಗಿ ಭಾಗವಹಿಸಿದ್ದರು.
ಗದಗ ಆನ್‍ಲೈನ್ ತಂಡದ ಅಡ್ಮಿನ್ ಮನೋಜ್ ಕ್ರೂಜ್ ಹಾಗೂ ತಂಡದ ಸದಸ್ಯರಾದ ಪ್ರಿನ್ಸ್‌ವೀರ್, ಭೀಮ್, ಸಂಜನಾ, ಮಂಜು ದಾಮೋದರ್, ರಾಜೇಶ್, ವಿವೇಕ್, ಬಸವರಾಜ ಮುಳ್ಳಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.