ಮುಂಡರಗಿ: ‘ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಲಾಭಾಂಶವನ್ನು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದು, ಇದರಿಂದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಂತಾಗಿದೆ’ ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಅಭಿಪ್ರಾಯಪಟ್ಟರು.
ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಚಂದನವನ ರೈತ ಉತ್ಪಾದಕ ಕಂಪನಿಯಿಂದ ಗ್ರಾಮದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಂಪನಿಯ ವಾರ್ಷಿಕೋತ್ಸವ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿವೆ. ಚಂದನವನ ರೈತ ಉತ್ಪಾದಕ ಕಂಪನಿ ಅಗತ್ಯ ನೆರವು ನೀಡುತ್ತಲಿದ್ದು, ರೈತ ಮಹಿಳೆಯರು ಸ್ವಾವಲಂಬಿಯಾಗಬೇಕು’ ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ರವಿ ಸಜ್ಜನರ ಮಾತನಾಡಿ, ‘ರೈತರು ರೈತ ಉತ್ಪಾದಕ ಕಂಪನಿಗಳ ಮೇಲೆ ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.
ಬಸವರಾಜ ಬೇವಿನಮರದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೃಷಿ ಚಟುವಟಿಕೆಗಳನ್ನು ಆಧರಿಸಿ ಒಂದು ಕಂಪನಿ ನಡೆಸುವುದು ಕಷ್ಟಸಾಧ್ಯ. ಕಂಪನಿ ಅಭಿವೃದ್ಧಿಗೆ ನೆರವು ನೀಡಿದ ವಿವಿಧ ರೈತಪರ ಸಂಘ ಹಾಗೂ ರೈತರಿಗೆ ಸದಾ ಸ್ಮರಣೀಯ’ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.
ಶಂಕರಗೌಡ ಪಾಟೀಲ ಸ್ವಾಗತಿಸಿದರು. ಲೀಲಾ ಜೊಂಡಿ ನಿರೂಪಿಸಿದರು. ಪರಡ್ಡಿ ಬಾವಿ ವಂದಿಸಿದರು.
ವಿ.ಜಿ. ಹಿರೆಮಠ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಎಸ್.ಬಿ. ರಾಮೇನಹಳ್ಳಿ, ಶಿವಲೀಲಾ ಬಂಡಿಹಾಳ, ಲಕ್ಷ್ಮವ್ವ ಕಾಶಿಬೋವಿ, ಆದರ್ಶ, ರಾಖೇಶ ಕದಾಂಪುರ, ಶಶಿಧರ ವಕ್ಕಲರ, ಸೋಮಣ್ಣ ಸೊಪ್ಪಿನ, ಫಕ್ಕಿರಯ್ಯ ಹಿರೇಮಠ, ಖಂಡಪ್ಪ ನೆಗಳೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.