ಲಕ್ಷ್ಮೇಶ್ವರ: ಕಳೆದ ಎರಡ್ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಮಳೆ ಬಂದರೆ ಹತ್ತಿ ಮಾರಾಟಕ್ಕೆ ಅಡ್ಡಿಯಾಗುತ್ತದೆ ಎಂದು ಅನ್ನದಾತರು ಲೆಕ್ಕ ಹಾಕಿದ್ದರು. ಹೀಗಾಗಿ ನಾಲ್ಕೈದು ದಿನಗಳಿಂದ ಪಟ್ಟಣದಲ್ಲಿ ಹತ್ತಿ ಮಾರಾಟ ಕಡಿಮೆ ಆಗಿತ್ತು. ಆದರೆ ಗುರುವಾರ ಮಳೆ ಪ್ರಭಾವ ಕಡಿಮೆ ಆದ ಹಿನ್ನೆಲೆ ತಾಲ್ಲೂಕಿನ ರೈತರು ಹತ್ತಿ ಮಾರಾಟಕ್ಕೆ ಮುಂದಾಗಿದ್ದರು.
ಇಲ್ಲಿನ ಬಿಸಿಎನ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಸಿಸಿಐ ಮೂಲಕ ಹತ್ತಿ ಖರೀದಿಸುತ್ತಿದೆ. ಮಳೆ ಇಲ್ಲದ ಕಾರಣ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ರೈತರು ಹತ್ತಿ ಮಾರಾಟಕ್ಕೆ ತಂದಿದ್ದರು. ಒಮ್ಮಿಂದೊಮ್ಮೆಲೇ ರೈತರು ಬಂದಿದ್ದರಿಂದ ಅರ್ಧ ಕಿ.ಮೀವರೆಗೆ ಹತ್ತಿ ತುಂಬಿಕೊಂಡಿದ್ದ ವಾಹನಗಳು ಸಾಲಾಗಿ ನಿಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.