ADVERTISEMENT

ಗದಗ | ಸಂಗೀತಾ ಭಂಡಾರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 5:31 IST
Last Updated 22 ನವೆಂಬರ್ 2022, 5:31 IST
ಉಪನ್ಯಾಸಕಿ ಸಂಗೀತಾ ಭಂಡಾರಿ ಅವರಿಗೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಶಸ್ತಿ ನೀಡಿ ಆಶೀರ್ವದಿಸಿದರು.
ಉಪನ್ಯಾಸಕಿ ಸಂಗೀತಾ ಭಂಡಾರಿ ಅವರಿಗೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಶಸ್ತಿ ನೀಡಿ ಆಶೀರ್ವದಿಸಿದರು.   

ಗದಗ: ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಹಿಂದಿ ಉಪನ್ಯಾಸಕಿ ಸಂಗೀತಾ ಭಂಡಾರಿ ಅವರಿಗೆ ಏಷ್ಯಾ ಸ್ಟಾರ್ ಐಕಾನ್ ಆರ್ಟ್ ಅಚೀವರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಕಲಾ ಗ್ಯಾಲರಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾರತದಾದ್ಯಂತ 30 ಕಲಾಕೃತಿಗಳಿಗೆ ಪ್ರಶಸ್ತಿ ಲಭಿಸಿದ್ದು, ಸಂಗೀತಾ ಅವರು ಕರ್ನಾಟಕದಿಂದ ಪ್ರಶಸ್ತಿ ಪಡೆದ ಏಕೈಕ ಕಲಾವಿದೆಯಾಗಿದ್ದಾರೆ.

ಆಧುನಿಕ ದಿನಗಳಲ್ಲಿ ಕುಸಿಯುತ್ತಿರುವ ತಂದೆ-ತಾಯಿಗಳ ಹಾಗೂ ಮಕ್ಕಳ ಸಂಬಂಧವನ್ನು ಚಿತ್ರಿಸಿದ್ದ ಇವರ ಕಲಾಕೃತಿಗೆ ಪ್ರಶಸ್ತಿ ದೊರೆತಿದೆ.

ADVERTISEMENT

ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಶಸ್ತಿ ನೀಡಿ ಆಶೀರ್ವದಿಸಿದರು.

ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್ ಪಟ್ಟಣಶೆಟ್ಟರ, ತೋಂಟದ ಸಿದ್ಧೇಶ್ವರ ಪಿ.ಯು ಕಾಲೇಜು ಪ್ರಾಚಾರ್ಯ ಕೊಟ್ರೇಶ ಮೆಣಸಿನಕಾಯಿ, ಪ್ರೊ.ವೈ.ಎಸ್.ಮತ್ತೂರ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.