
ಗದಗ: ಬೆಟಗೇರಿಯ ವಾರ್ಡ್ ನಂ.7ರ ಬೆಟಗೇರಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಭಜಂತ್ರಿ ಸಮುದಾಯ ಭವನದ ಹತ್ತಿರ ಸ್ವಚ್ಛ ಭಾರತ 0.2 ಯೋಜನೆ ಅಡಿಯಲ್ಲಿ ₹20 ಲಕ್ಷ ಅನುದಾನದಡಿ ನಿರ್ಮಿಸಲಾಗುತ್ತಿರುವ ನೂತನ ಗೌರವ ಘಟಕ (ಶೌಚಾಲಯ) ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಚಾಲನೆ ನೀಡಿದರು.
ರಾಘವೇಂದ್ರ ಯಳವತ್ತಿ ಮಾತನಾಡಿ, ‘ವಾರ್ಡ್ ವ್ಯಾಪ್ತಿಯು ಭೌಗೋಳಿಕವಾಗಿ ತುಂಬಾ ದೊಡ್ಡದಾಗಿದೆ. ಆದ್ದರಿಂದ ಅಭಿವೃದ್ಧಿ ಕಾರ್ಯಗಳನ್ನು ಎಲ್ಲಾ ಭಾಗದಲ್ಲಿ ಸಮರ್ಪಕವಾಗಿ ಮಾಡಲು ಆಗುತ್ತಿಲ್ಲ. ಆದರೂ ಸಾಧ್ಯವಾದಷ್ಟು ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹಿರಿಯರಾದ ಶ್ರೀನಿವಾಸ ಹುಬ್ಬಳ್ಳಿ, ಹುಚ್ಚಪ್ಪ ಭಜಂತ್ರಿ, ಚಿನ್ನಪ್ಪ ನೆಗಳೂರ, ವೆಂಕಟೇಶ ಹಡಗಲಿ, ಶಿವರುದ್ರಪ್ಪ ಮಡಿವಾಳರ, ನಿಂಗಪ್ಪ ದೊಡ್ಡಮನಿ, ಗ್ಯಾನೋಬ ಪತಂಗಿ, ಈರಣ್ಣಾ ಬ್ಯಾಹಟ್ಟಿ, ಸಿದ್ದು ಪಿಂಡಕೂರ, ಮೈಲಾರಿ ತುರಕಾಣಿ, ವೆಂಕಟೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.