ಲಕ್ಷ್ಮೇಶ್ವರ: ‘ಕಳೆದ ಆರು ದಶಕಗಳಿಂದ ಪಟ್ಟಣದಲ್ಲಿ ಆಸ್ತಮಾ ರೋಗಿಗಳಿಗೆ ಉಚಿತ ಮಂತ್ರೌಷಧ ವಿತರಿಸುವ ಮೂಲಕ ಲಕ್ಷ್ಮೇಶ್ವರದ ಕೀರ್ತಿಯನ್ನು ನಾಡಿನುದ್ದಕ್ಕೂ ಹಬ್ಬುವಂತೆ ಮಾಡಿದ್ದ ದಿ.ಡಾ.ವೈದ್ಯಬಾಬುರಾವ್ ಕುಲಕರ್ಣಿ ಇವರ ಸೇವೆ ಅನುಮಪವಾದದ್ದು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಔಷಧ ವಿತರಣೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ’ ಎಂದು ಪುರಸಭೆ ಮಾಜಿ ಅಧಕ್ಷ ವಿ.ಜಿ. ಪಡಗೇರಿ ಹೇಳಿದರು.
ದಿ.ವೈದ್ಯ ಬಾಬುರಾವ್ ಕುಲಕರ್ಣಿಯವರ ನಿವಾಸದಲ್ಲಿ ಭಾನುವಾರ 59ನೇ ವರ್ಷದ ಉಚಿತ ಆಸ್ತಮಾ ಔಷಧ ವಿತರಣಾ ಕಾರ್ಯಕ್ರಮದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಬಾರಿ ಜೂನ್ 8ರಂದು ಭಾನುವಾರ ಮದ್ಯಾಹ್ನ 1.23ಕ್ಕೆ ಮೃಗಶಿರಾ ಮಳೆಯ ಪ್ರವೇಶ ಕಾಲದಲ್ಲಿ ಡಾ.ಹರೀಶ ಕುಲಕರ್ಣಿ ಅವರ ನೇತೃತ್ವದಲ್ಲಿ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ ಆಸ್ತಮಾ ಯಜ್ಞ ನಡೆಯಲಿದೆ. ಔಷಧಕ್ಕಾಗಿ ಬರುವ ರೋಗಿಗಳಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು’ ಎಂದರು.
ಎಂ.ಆರ್. ಪಾಟೀಲ, ಗೋಪಾಲ ಪಡ್ನೀಸ್, ನಿಂಗಪ್ಪ ಬನ್ನಿ ಮಾತನಾಡಿದರು. ಪಲ್ಲಣ್ಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ.ಹರೀಶ ಕುಲಕರ್ಣಿ, ಪುಟ್ಟಪ್ಪ ಕೋರಿ, ಗಂಗಪ್ಪ ದುರಗಣ್ಣವರ, ಕರಿಯಪ್ಪ ಉಳ್ಳಟ್ಟಿ, ನಾಗರಾಜ ಕೋರಿ, ನಿಂಗಪ್ಪ ಕಲ್ಯಾಣಿ, ಬಸವರಾಜ ಗುಡಗುಂಟಿ, ಕೃಷ್ಣ ಕ್ಷತ್ರಿ, ಪಾಪಣ್ಣ ಬನ್ನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.