
ನರೇಗಲ್: ಪಟ್ಟಣದ ಭೋವಿ ವಡ್ಡರ್ ಸಮಾಜದ ವತಿಯಿಂದ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣನವರ 226ನೇ ಜಯಂತಿಯನ್ನು ಬುಧವಾರ ಆಚರಣೆ ಮಾಡಲಾಯಿತು.
ಗದಗ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ಮಾತನಾಡಿ, ಕಿತ್ತೂರಿನ ರಾಣಿ ಚೆನ್ನಮ್ಮನವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬಲಗೈ ಬಂಟನಾಗಿ ಸುಮಾರು 800 ಸೈನಿಕರೊಂದಿಗೆ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕ ವಡ್ಡರ ಯಲ್ಲಣ್ಣನವರು. ವೈರಿಗಳು 3 ಮೈಲಿ ದೂರ ಇರುವುದನ್ನು ಕೇವಲ ನೆಲಕ್ಕೆ ಕಿವಿ ಕೊಟ್ಟು ಕೇಳಿ ಅದರ ಮಾಹಿತಿಯನ್ನು ರವಾನೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಯುದ್ದದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದ ಮಹಾನ್ ಸೇನಾನಿಯಾಗಿದ್ದಾನೆ. ಈ ಕುರಿತು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಆದ್ದರಿಂದ ಕ್ರಾಂತಿಕಾರಿ ವಡ್ಡರ ಯಲ್ಲಣ್ಣನವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಭೋವಿ ಸಮಾಜದ ಯುವಕರಾದ ರಾಜು ಆದೋನಿ, ವೆಂಕಟೇಶ್ ಕಟ್ಟಿಮನಿ, ಗಣೇಶ್ ಲಕ್ಷ್ಮೇಶ್ವರ, ವೀರೇಶ ಮಣ್ಣೊಡ್ಡರ, ಸುದೀಪ್ ಪಿ, ಸಿರಾಜ್ ಹೊಸಮನಿ, ಕೃಷ್ಣ ಮಣ್ಣೊಡರ, ದರ್ಶನ ಕರಮುಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.