ADVERTISEMENT

ಗದಗ: ಅಪರೂಪದ ಬಾಂಬೆ ನೆಗಟಿವ್‌ ರಕ್ತದ ಗುಂಪು ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:22 IST
Last Updated 24 ಸೆಪ್ಟೆಂಬರ್ 2025, 5:22 IST
ರಕ್ತ ಘಟಕವನ್ನು ಕೋಲ್ಡ್ ಚೈನ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಬೆಂಗಳೂರು ಮೂಲಕ ಸೂರತ್‌ಗೆ ಕಳುಹಿಸಲಾಗಿದೆ 
ರಕ್ತ ಘಟಕವನ್ನು ಕೋಲ್ಡ್ ಚೈನ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಬೆಂಗಳೂರು ಮೂಲಕ ಸೂರತ್‌ಗೆ ಕಳುಹಿಸಲಾಗಿದೆ    

ಗದಗ: ನಗರದ ಐಎಂಎ ರಕ್ತನಿಧಿ ಕೇಂದ್ರದಲ್ಲಿ ಅಪರೂಪದ ರಕ್ತದ ಗುಂಪು ಪತ್ತೆ ಆಗಿದೆ. ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಗದಗ ವೈದ್ಯರು ಅಪರೂಪದ ರಕ್ತದ ಗುಂಪು ಪತ್ತೆಹಚ್ಚಿದ್ದು, ಅದು ಬಾಂಬೆ ಆರ್‌ಎಚ್-ನೆಗೆಟಿವ್ ಎಂದು ತಿಳಿದುಬಂದಿದೆ.

ರಕ್ತ ಪರೀಕ್ಷಿಸಿದ ತಜ್ಞ ವೈದ್ಯರು, ‘ಇದು ಅಪರೂಪದ ಫಿನೋಟೈಪ್ ಆಗಿದ್ದು, ಇದನ್ನು ಎಚ್‌ಎಚ್ ಗುಂಪು ಎಂದೂ ಕರೆಯುತ್ತಾರೆ ಈ ಗುಂಪು ಬಾಂಬೆ ಆರ್‌ಎಚ್-ಪಾಸಿಟಿವ್‌ಗಿಂತಲೂ ಅಪರೂಪ. ಸುಮಾರು ಹತ್ತು ಸಾವಿರ ಜನರಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ’ ಎಂದು ತಿಳಿಸಿದ್ದಾರೆ.

ಗದಗ ವೈದ್ಯರು ಈ ವಿಷಯವನ್ನು ಬೆಂಗಳೂರು ಮೂಲದ ಎನ್‌ಜಿಒ, ಅಪರೂಪದ ರಕ್ತ ಗುಂಪುಗಳಲ್ಲಿ ಪರಿಣತಿ ಹೊಂದಿರುವ ಸಂಕಲ್ಪ ಫೌಂಡೇಶನ್‌ ವೈದ್ಯರಿಗೆ ತಿಳಿಸಿದ್ದಾರೆ. ಈಗ ಗದಗ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಂಡದ ಸಹಾಯದಿಂದ ಸೂರತ್‌ಗೆ ಅಪರೂಪದ ರಕ್ತವನ್ನು ಕಳುಹಿಸಲಾಗಿದೆ. ರಕ್ತ ಘಟಕವನ್ನು ಕೋಲ್ಡ್ ಚೈನ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಬೆಂಗಳೂರು ಮೂಲಕ ಸೂರತ್‌ಗೆ ಕಳುಹಿಸಲಾಗಿದೆ.

ADVERTISEMENT

ಲ್ಯಾಬ್ ತಂತ್ರಜ್ಞರು ಮೊದಲು ರಕ್ತ ಪರೀಕ್ಷಿಸಿದಾಗ ಅದು ಎ, ಬಿ, ಎಬಿ, ಒ ನೆಗೆಟಿವ್ ಅಥವಾ ಪಾಸಿಟಿವ್ ಅಲ್ಲ ಅಂತ ತಿಳಿದುಬಂದಾಗ ಆಶ್ವರ್ಯಗೊಂಡರು. ನಂತರ ಅವರು ಡಾ. ರಾಜಶೇಖರ್ ಪವಾಡಶೆಟ್ಟರ ಮತ್ತು ಡಾ. ಶ್ರೀಧರ್ ಕುರಡಗಿ ಅವರಿಗೆ ಮಾಹಿತಿ ನೀಡಿದರು. ಅದು ಬಾಂಬೆ ನೆಗೆಟಿವ್ ಎಂದು ಕಂಡುಬಂದಿದೆ.

ರಕ್ತ ಬ್ಯಾಂಕ್ ಕಾರ್ಯದರ್ಶಿ ಡಾ. ಅವಿನಾಶ್ ಓದುಗೌಡರ್, ವ್ಯವಸ್ಥಾಪಕ, ಡಾ. ಪ್ಯಾರಾಲಿ ನೂರಾನಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.