ADVERTISEMENT

ನಗರಸಭೆ ಎಇಇ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 15:44 IST
Last Updated 14 ಜುಲೈ 2021, 15:44 IST
ವರ್ಧಮಾನ
ವರ್ಧಮಾನ    

ಗದಗ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಗದಗ ಬೆಟಗೇರಿ ನಗರಸಭೆ ಲೋಕೋಪಯೋಗಿ ವಿಭಾಗದ ಎಇಇ ವರ್ಧಮಾನ ಎಸ್‌.ಹುದ್ದಾರ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ಪಡೆದಿದ್ದ ಅಬ್ದುಲ್‌ ಸಲಾಂ ಎಂಬುವರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ.

ಗುತ್ತಿಗೆದಾರ ಅಬ್ದುಲ್‌ ಸಲಾಂ ಅವರು ಘನತ್ಯಾಜ್ಯ ವಿಲೇವಾರಿ ಮಾಡಿದ ₹14 ಲಕ್ಷದ ಬಿಲ್‌ ಮಾಡಿಕೊಡಲು ಎಇಇ ವರ್ಧಮಾನ ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬುಧವಾರ ಸಂಜೆ ನಗರಸಭೆ ಶೌಚಾಲಯದ ಬಳಿ ಕಮಿಷನ್‌ ಹಣ ಪಡೆಯುವಾಗ ವರ್ಧಮಾನ ಎಸಿಬಿ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ADVERTISEMENT

ಎಸಿಬಿ ಡಿವೈಎಸ್‌ಪಿ ವೇಣುಗೋಪಾಲ, ಇನ್‌ಸ್ಪೆಕ್ಟರ್‌ ಆರ್‌.ಎಫ್‌.ದೇಸಾಯಿ, ಇನ್‌ಸ್ಪೆಕ್ಟರ್‌ ವೀರೇಶ್‌ ಹಳ್ಳಿ, ಧಾರವಾಡ ಎಸಿಬಿ ಇನ್‌ಸ್ಪೆಕ್ಟರ್‌ ಶೇಖ, ಸಿಬ್ಬಂದಿಯಾದ ಷರೀಫ್‌ ಮುಲ್ಲಾ, ಆರ್‌.ಎಸ್‌.ಹೆಬಸೂರು, ನಾರಾಯಣಗೌಡ ತಾಯಣ್ಣನವರ್‌, ಎಂ.ಎಂ.ಅಯ್ಯನಗೌಡ್ರ, ವೀರೇಶ್‌ ಜೋಳದ, ಐ.ಸಿ.ಜಾಲಿಹಾಳ, ಮಂಜು ಮುಳಗುಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.