ಗದಗ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ತೆರಿಗೆ ಇಳಿಕೆ ನಿರ್ಧಾರ ಕೈಗೊಂಡಿದ್ದಾರೆ. ಸೆ.22ರಿಂದ ಆ ನಿರ್ಧಾರವು ಜಾರಿಯಾಗಿದೆ. ಶೇ 28ರಿಂದ 18ಕ್ಕೆ, ಶೇ12ರಿಂದ 5ಕ್ಕೆ ತೆರಿಗೆ ಇಳಿಕೆಯಾಗಿದೆ. ಇದರಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ’ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ ತಿಳಿಸಿದರು.
ಬಿಜೆಪಿ ಗದಗ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಜಿಎಸ್‍ಟಿ ವ್ಯಾಪ್ತಿಗೆ ಬರುವ ಎಲ್ಲರ ನೇತೃತ್ವದಲ್ಲಿ ಗದಗ ನಗರದಲ್ಲಿ ಸೋಮವಾರ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಗದಗ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಎಸ್.ಕರೀಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ.ಚವ್ಹಾಣ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಪ್ರಧಾನ ಕಾರ್ಯದರ್ಶಿ ಶಂಕರ ಕಾಕಿ, ಸುರೇಶ ಚಿತ್ತರಗಿ, ಪ್ರಮುಖರಾದ ಅನಿಲ ಅಬ್ಬಿಗೇರಿ, ಶಶಿಧರ ದಿಂಡೂರ, ಮಂಜುನಾಥ ಮುಳಗುಂದ, ಕೆ.ಪಿ.ಕೋಟಿಗೌಡ್ರ, ರಮೇಶ ಸಜ್ಜಗಾರ, ನಾಗರಾಜ ತಳವಾರ, ಜಯಶ್ರೀ ಉಗಲಾಟದ, ವಿಜಯಲಕ್ಷ್ಮೀ ಮಾನ್ವಿ, ಸುರೇಶ ಚಲವಾದಿ, ಕಾರ್ತಿಕ ಶಿಗ್ಲಿಮಠ, ರಾಚಯ್ಯ ಹೊಸಮಠ, ರವಿ ಮಾನ್ವಿ, ದೇವೇಂದ್ರಪ್ಪ ಹೂಗಾರ, ಅವಿನಾಶ ಹೊನಗುಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.