ADVERTISEMENT

ಗದಗ | 'ವಚನಗಳಿಂದ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನ'

2,775ನೇ ಶಿವಾನುಭವ ಕಾರ್ಯಕ್ರಮದಲ್ಲಿ ಶಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:52 IST
Last Updated 16 ಡಿಸೆಂಬರ್ 2025, 2:52 IST
ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಕವಿ, ರಂಗಕರ್ಮಿ ಸಂತೋಷ ಅಂಗಡಿ ಮಾತನಾಡಿದರು
ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಕವಿ, ರಂಗಕರ್ಮಿ ಸಂತೋಷ ಅಂಗಡಿ ಮಾತನಾಡಿದರು   

ಗದಗ: ‘ವಚನಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಕಲಿಸುತ್ತವೆ’ ಎಂದು ಶಾಂತಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ ನಡೆದ 2,775ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದರು.

‘ತೋಂಟದಾರ್ಯ ಮಠದ ಶಿವಾನುಭವ ವೈಶಿಷ್ಟ್ಯಪೂರ್ಣವಾಗಿದೆ. ಸಾಹಿತ್ಯ, ಸಂಗೀತ, ಕಲೆ ಸೇರಿದಂತೆ ಅನೇಕ ಔಚಿತ್ಯಪೂರ್ಣ ಕಾರ್ಯಕ್ರಮಗಳನ್ನು ಉಣಬಡಿಸುತ್ತಿದೆ. ಮಕ್ಕಳು ಜಗತ್ತು ಬೆಳಗುವ ದೀಪಗಳು. ಮಕ್ಕಳು ಬೆಳೆಯುವಾಗಲೇ ಅವರ ಸಿರಿ ಕಾಣಬಹುದು’ ಎಂದು ಹೇಳಿದರು.

ADVERTISEMENT

ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಂದ್ರ ಗಡಾದ ಮಾತನಾಡಿ, ‘ಮಕ್ಕಳು ಭವಿಷ್ಯದ ಕನಸುಗಳು, ಮಕ್ಕಳನ್ನು ಸರಿದಾರಿಗೆ ತರುವ ಸಂಸ್ಕೃತಿ ಶಿವಾನುಭವದಿಂದ ಸಾಧ್ಯ. ಸತ್ಯ ಅಹಿಂಸೆ ನ್ಯಾಯ ಸಮಾನತೆ ನಂಬಿಕೆ ಇವುಗಳನ್ನು ಶರಣರು ಹಾಕಿಕೊಟ್ಟರು’ ಎಂದರು.

‘ಡಿ.ಎಸ್.ಕರ್ಕಿ ಪ್ರಶಸ್ತಿ’ ಪಡೆದ ಕವಿ, ರಂಗಕರ್ಮಿ, ನಟ, ನಿರ್ದೇಶಕ ರಣತೂರಿನ ಸಂತೋಷ ಅಂಗಡಿ ಅವರನ್ನು ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಮತ್ತು ಕುಮಾರ ಹಿರೇಮಠ ವಚನ ಸಂಗೀತ ನಡೆಸಿಕೊಟ್ಟರು. ಶ್ರಾವಣಿ ಡಿ ಪಾಟೀಲ ಧರ್ಮಗ್ರಂಥ ಪಠಿಸಿದರು. ಅದಿತಿ ಕೆ. ಇಂಗಳಳ್ಳಿ ವಚನ ಚಿಂತನ ನಡೆಸಿಕೊಟ್ಟರು.  

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಇದ್ದರು.

ಸೋಮಶೇಖರ ಪುರಾಣಿಕ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಇಂದಿನ ಮಕ್ಕಳು ವಿದ್ಯಾವಂತರು; ಆದರೆ ವಿಚಾರವಂತರಲ್ಲ. ವಚನಗಳಲ್ಲಿರುವ ಮೌಲ್ಯಗಳನ್ನು ಮಕ್ಕಳ ಮನಃಪಟಲದಲ್ಲಿ ಬಿತ್ತಬೇಕು. ಮಕ್ಕಳಿಗೆ ತಿಳಿಯುವಂತ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಹಾಕಬೇಕು

–ರಾಜೇಂದ್ರ ಗಡಾದ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.