ಗಜೇಂದ್ರಗಡ: ‘ತಹಶೀಲ್ದಾರ್ ಕಚೇರಿಯನ್ನು ಎಪಿಎಂಸಿ ಆವರಣದಲ್ಲಿರುವ ಟೆಂಡರ್ ಹಾಲ್‌ಗೆ ಸ್ಥಳಾಂತರಿಸುವ ನಿರ್ಧಾರ ವಿರೋಧಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ದಾದಾಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
‘ಗಜೇಂದ್ರಗಡ ಪಟ್ಟಣ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಈಗಾಗಲೇ ತಾಲ್ಲೂಕು ಕಚೇರಿಗಳ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಹೀಗಿರುವಾಗ ತಹಶೀಲ್ದಾರ್ ಕಚೇರಿಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವುದರಿಂದ ಹಲವು ತೊಂದರೆಗಳು ಉಂಟಾಗಲಿವೆ. ಕೂಡಲೇ ಕಚೇರಿ ಸ್ಥಳಾಂತರ ಬಿಡಬೇಕು’ ಎಂದು ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.
ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು ಬಳಿಕ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಪ್ಪ ಮುಶಿಗೇರಿ, ಡಿ.ಜಿ. ಕಟ್ಟಿಮನಿ, ಡಿ.ಎಂ. ಸಂದಿಮನಿ, ಮಂಜುನಾಥ ಬುರಡಿ, ರವಿ ಮಾದರ, ಯಮನೂರಪ್ಪ ಪುರ್ತಗೇರಿ, ಮಾರುತಿ ಹಾದಿಮನಿ, ಸಣ್ಣಪ್ಪ ಪೂಜಾರ, ಭೀಮಪ್ಪ ಹಿರೇಹಾಳ, ಯಲ್ಲಪ್ಪ ಶಾಂತಗೇರಿ, ರೋಣಪ್ಪ ಚಿಲಝರಿ, ಚನ್ನಪ್ಪ ಪೂಜಾರ, ದುರಗಪ್ಪ ಹಿರೇಮನಿ, ಶಿವು ಭೂಮದ, ಶರಣು ಅರಳಿಗಿಡದ, ಯಮನೂರ ಅಬ್ಬಿಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.