
ಗಜೇಂದ್ರಗಡ: ಪಟ್ಟಣದ 15ನೇ ವಾರ್ಡ್ ನೇಕಾರ ಕಾಲೊನಿಯಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
‘ಕಾಲೊನಿಯ ಬಹುತೇಕ ಚರಂಡಿಗಳು ಶಿಥಿಲಗೊಂಡು ಹೂಳು ತುಂಬಿಕೊಂಡಿವೆ. ಸ್ವಲ್ಪ ಮಳೆ ಬಂದರೆ ಸಾಕು ರಸ್ತೆ ತುಂಬ ಚರಂಡಿ ನೀರು ಹರಿಯುತ್ತದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಈ ಹಿಂದೆ ಜೆಸಿಬಿಯಿಂದ ಹೂಳು ತೆಗೆಯುವಾಗ ಚರಂಡಿ ಗೋಡೆ ಹಾಳಾಗಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ನಿವಾಸಿಗಳಾದ ಹನಮಂತಪ್ಪ ಚುಂಚಾ, ಪ್ರಹ್ಲಾದ ಬಳೂಟಗಿ, ಬಸವರಾಜ ಯಡವಳ್ಳಿ, ವೀರಣ್ಣ ಮರದಡ್ಡಿ ಆಗ್ರಹಿಸಿದರು.
ಚರಂಡಿ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು ಶಾಸಕರ ವಿಶೇಷ ಅನುದಾನದಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರೀಯಾ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಚರಂಡಿ ನಿರ್ಮಿಸಿ ಸಮಸ್ಯೆಗೆ ಪರಿಹರಿಸಲಾಗುವುದುಸವಿತಾ ಬಿದರಳ್ಳಿ ಪುರಸಭೆ ಉಪಾಧ್ಯಕ್ಷೆ ಗಜೇಂದ್ರಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.