ಗಜೇಂದ್ರಗಡ: ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿದ ಕಾರಣ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗುವ ನಿರೀಕ್ಷೆಯಿದ್ದು, ರೈತರು ಯೂರಿಯಾ ಗೊಬ್ಬರ ಅಗತ್ಯವಿದೆ.
ಕಳೆದ ಒಂದು ವಾರದಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ಮಾರುಕಟ್ಟೆಗೆ ಅಲೆಯುತ್ತಿದ್ದು, ಸೋಮವಾರ ಪಟ್ಟಣದ ವಿದ್ಯಾಶ್ರೀ, ಶಿವ ಮಲ್ಲಿಕಾರ್ಜುನ, ಶರಣಬಸವೇಶ್ವರ, ಚೌಡೇಶ್ವರಿ ಅಗ್ರೋ ಕೇಂದ್ರಗಳಿಗೆ ತಲಾ 20 ಟನ್ ಯೂರಿಯಾ ಪೂರೈಕೆಯಾಗಿತ್ತು. ರೈತರು ಗೊಬ್ಬರ ಪಡೆಯಲು ಅಂಗಡಿಗಳ ಮುಂದೆ ಸರದಿಯಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳು ಕಂಡುಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.