ADVERTISEMENT

ಕಾಮಗಾರಿ ಬಿಲ್‌ ಪಾವತಿಸಲು ₹3 ಲಕ್ಷ ಲಂಚ: PWD ಎಂಜನಿಯರ್‌ ಮಹೇಶ ರಾಠೋಡ ಬಂಧನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:17 IST
Last Updated 10 ಅಕ್ಟೋಬರ್ 2025, 5:17 IST
<div class="paragraphs"><p>ಮಹೇಶ ರಾಠೋಡ</p></div>

ಮಹೇಶ ರಾಠೋಡ

   

ಗಜೇಂದ್ರಗಡ: ಪಟ್ಟಣದಲ್ಲಿ ಕಾಮಗಾರಿ ಬಿಲ್‌ ಪಾವತಿಸಲು ಗುತ್ತಿಗೆದಾರರಿಂದ ₹3 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕೋಪಯೋಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ (ಎಇಇ) ಮಹೇಶ ರಾಠೋಡ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ಯಾದಗಿರಿ ಜಿಲ್ಲೆಯ ದ್ವಿತೀಯ ದರ್ಜೆ ಗುತ್ತಿಗೆದಾರ ಶರಣಪ್ಪ ಸಾಬಣ್ಣ ಅವರು ರೋಣ ತಾಲ್ಲೂಕಿನ ₹34 ಲಕ್ಷ ಮೌಲ್ಯದ ಕಾಮಗಾರಿಯನ್ನು ಆನ್‌ಲೈನ್‌ ಮೂಲಕ ಗುತ್ತಿಗೆ ಪಡೆದು 6 ತಿಂಗಳ ಹಿಂದೆಯೆ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಬಿಲ್‌ ಪಾವತಿಗೆ ಲೋಕೋಪಯೋಗಿ ಇಲಾಖೆಯ ಎಇಇ ಮಹೇಶ ರಾಠೋಡ ₹4.60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದೆವು. ₹ 3 ಲಕ್ಷ ಮುಂಗಡವಾಗಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಯಿತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಕಾರ್ಯಾಚರಣೆಯನ್ನು ಧಾರವಾಡದ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಗದಗ ಉಪಾಧೀಕ್ಷಕ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.