ADVERTISEMENT

ಗದಗ | ಹಬ್ಬದ ಸಂಭ್ರಮ; ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:22 IST
Last Updated 6 ಸೆಪ್ಟೆಂಬರ್ 2024, 15:22 IST
ಗೌರಿ–ಗಣೇಶ ಹಬ್ಬದ ಅಂಗವಾಗಿ ಗದಗ ನಗರದ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ ಜೋರಾಗಿತ್ತು
ಗೌರಿ–ಗಣೇಶ ಹಬ್ಬದ ಅಂಗವಾಗಿ ಗದಗ ನಗರದ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ ಜೋರಾಗಿತ್ತು   

ಗದಗ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಳಿ ನಗರದ ಎಲ್ಲೆಡೆ ಭರದ ಸಿದ್ಧತೆ ನಡೆದಿದ್ದು, ಮಾರುಕಟ್ಟೆಗಳಲ್ಲಿ ಶುಕ್ರವಾರ ಖರೀದಿ ಭರಾಟೆ ಜೋರಾಗಿತ್ತು.

ಎರಡು ದಿನಗಳಿಂದ ನಗರದ ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿದೆ. ಶುಕ್ರವಾರವಂತೂ ಜನಜಂಗುಳಿ ಹೆಚ್ಚಿತ್ತು. ನಗರದ ಗ್ರೇನ್ ಮಾರುಕಟ್ಟೆ, ಬ್ಯಾಂಕ್ ರಸ್ತೆ, ಟಾಂಗಾ ಕೂಟ, ಸ್ಟೇಷನ್ ರಸ್ತೆ, ಮಹೇಂದ್ರಕರ ವೃತ್ತಗಳಲ್ಲಿ ಗಣೇಶ ಪೂಜೆ, ವೇದಿಕೆ ಅಲಂಕಾರಕ್ಕೆ ಅಗತ್ಯವಾದ ಬಾಳೆ ದಿಂಡುಗಳು, ಕಬ್ಬು, ಸೇವಂತಿಗೆ, ಮಲ್ಲಿಗೆ, ಚೆಂಡು ಹೂವು, ನಾನಾ ತರದ ಹಣ್ಣುಗಳ ಖರೀದಿ ಜೋರಾಗಿ ನಡೆಯಿತು.

ಜೋಡಿ ಬಾಳೆದಿಂಡಿಗೆ ₹100ರಿಂದ ₹150, ಐದು ಬಗೆಯ ಹಣ್ಣುಗಳ ಒಂದು ಬುಟ್ಟಿಗೆ ₹150ರಿಂದ ₹200 ಇತ್ತು. ಒಂದು ಮಾರು ಚೆಂಡು ಹೂ, ಆಬಾಲಿ, ಮಲ್ಲಿಗೆ ಹೂ ₹80ರಿಂದ ₹100ಕ್ಕೆ ಮಾರಾಟವಾದವು. ಅಲಂಕಾರಿಕ ವಸ್ತುಗಳಾದ ಜೂಮರ್, ಬಲೂನ್, ವಿದ್ಯುತ್ ದೀಪಗಳ ಸರಮಾಲೆಗೆ ಮಾಮೂಲಿ ದರವಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.