ADVERTISEMENT

ಜಾತಿ ಗಣತಿ: ಹಡಪದ ಜಾತಿ ನಮೂದಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:23 IST
Last Updated 24 ಸೆಪ್ಟೆಂಬರ್ 2025, 5:23 IST
ಮುಂಡರಗಿ ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಾರ್ಯಕರ್ತರು ಜಾತಿ ಗಣತಿ ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು
ಮುಂಡರಗಿ ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಾರ್ಯಕರ್ತರು ಜಾತಿ ಗಣತಿ ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು   

ಮುಂಡರಗಿ: ‘ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಹಡಪದ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಹಡಪದ ಎಂದು ನಮೂದಿಸಬೇಕು’ ಎಂದು ರಾಜ್ಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಾರ್ಯಾಧ್ಯಕ್ಷ ದೇವು ಹಡಪದ ತಿಳಿಸಿದರು.

ತಾಲ್ಲೂಕು ಹಡಪದ ಶಿವಶರಣ ಸಮಾಜ ಸೇವಾ ಸಂಘವು ಮಂಗಳವಾರ ಹಮ್ಮಿಕೊಂಡಿದ್ದ ಜಾತಿ ಗಣತಿ ಕುರಿತು ಜಾಗೃತಿ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿರುವ ಹಡಪದ ಸಮಾಜದವರು ನಾವಿ, ಸವಿತಾ, ಕ್ಷೌರಿಕ ಮೊದಲಾದ ನಾಮಗಳಿಂದ ಗುರುತಿಸಿಕೊಂಡಿದ್ದು, ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ. ಕುಲಕಸುಬಿನ ಕಾಲಂನಲ್ಲಿ ಕ್ಷೌರಿಕ ವೃತ್ತಿ ಎಂದು ನಮೂದಿಸಬೇಕು’ ಎಂದು ಮನವಿ ಮಾಡಿಕೊಂಡರು.

ADVERTISEMENT

ತಾಲ್ಲೂಕು ಹಡಪದ ಶಿವಶರಣ ಸಮಾಜ ಸೇವಾ ಸಂಘದ ಅಧ್ಯಕ್ಷ ಈರಣ್ಣ ಹಡಪದ ಮಾತನಾಡಿ, ‘ಗಣತಿ ಸಮಯದಲ್ಲಿ ಹಡಪದ ಸಮಾಜದವರು ಸಮಾಜದ ಮುಖಂಡರು ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಹಡಪದ ಜಾತಿ ನಮೂದಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು’ ಎಂದರು.

ತಾಲ್ಲೂಕಿನ ಎಲ್ಲ ಗ್ರಾಮಗಳ ಹಡಪದ ಸಮಾಜದ ಮುಖಂಡರು ತಮ್ಮ ಗ್ರಾಮಗಳಲ್ಲಿ ಕರಪತ್ರ ವಿತರಿಸಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.

ಮುಖಂಡರಾದ ಶಿವಾನಂದ ಹಡಪದ, ನಾಗರಾಜ ಹಡಪದ, ಕೊಟ್ರಪ್ಪ ಹಡಪದ, ಶೇಖರಪ್ಪ ಹಡಪದ, ಶಿವಾನಂದ ಹಡಪದ, ಸುರೇಶ ಹಡಪದ, ವಿ.ವಿ. ಹಡಪದ, ಗುರುರಾಜ ಹಡಪದ, ನಿಂಗಪ್ಪ ಹಡಪದ, ರವಿ ಹಡಪದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.