ADVERTISEMENT

ಸಮಾಜದ ಅಂಕು–ಡೊಂಕು ತಿದ್ದಿದ ಅಪ್ಪಣ್ಣ: ಈರಣ್ಣ ಹಡಪದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 13:52 IST
Last Updated 22 ಜುಲೈ 2024, 13:52 IST
ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಅಚರಿಸಲಾಯಿತು
ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಅಚರಿಸಲಾಯಿತು   

ಮುಂಡರಗಿ: ‘ಹಡಪದ ಅಪ್ಪಣ್ಣನವರು ತಮ್ಮ ಅನುಭವಗಳ ಆಧಾರದಲ್ಲಿ ಅದ್ಭುತ ವಚನಗಳನ್ನು ರಚಿಸಿದ್ದರು. ತಮ್ಮ ವಚನಗಳು ಹಾಗೂ ಸತ್ಯ, ಶುದ್ಧ ಕಾಯಕದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು’ ಎಂದು ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಈರಣ್ಣ ಹಡಪದ ಹೇಳಿದರು.

ತಾಲ್ಲೂಕು ಅಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು.

‘ಹಡಪದ ಅಪ್ಪಣ್ಣ ಸೇರಿದಂತೆ ಶರಣರೆಲ್ಲ ನುಡಿದಂತೆ ನಡೆದರು. ಹೀಗಾಗಿ ಅವರ ತತ್ವಾದರ್ಶಗಳನ್ನೆಲ್ಲ ಎಲ್ಲ ವರ್ಗದ ಜನರು ಮೆಚ್ಚಿದರು’ ಎಂದರು.

ADVERTISEMENT

ತಹಶೀಲ್ದಾರ್ ಧನಂಜಯ ಮಾಲಗತ್ತಿ ಮಾತನಾಡಿ, ‘ಶಿಕ್ಷಣಕ್ಕೆ ದೊಡ್ಡ ಶಕ್ತಿ ಇದೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶರಣರು ಸಮಸಮಾಜ ನಿರ್ಮಾಣಕ್ಕೆ ಮಹತ್ವ ನೀಡುವುದರ ಜೊತೆಗೆ ಕಾಯಕಕ್ಕೂ ತುಂಬಾ ಮಹತ್ವ ನೀಡುತ್ತಿದ್ದರು. ಆದ್ದರಿಂದ ನಾವೆಲ್ಲರೂ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಾಯಕ ಪ್ರೀತಿಯನ್ನು ಕಲಿಸಬೇಕು’ ಎಂದು ಸಲಹೆ ನೀಡಿದರು.

ಎಸ್.ಎಸ್.ಬಿಚ್ಚಾಲಿ, ದೇವು ಹಡಪದ, ಅಡಿವೆಪ್ಪ ಚಲವಾದಿ, ಶಂಕರ ಬಾವಿಮನಿ  ಮಾತನಾಡಿದರು. ದೇವಪ್ಪ ಚಿಕ್ಕಣ್ಣವರ, ಶಿವು ವಾಲಿಕಾರ, ಉದಯಕುಮಾರ ಹಡಪದ, ನಾಗರಾಜ ಹಡಪದ, ಶೇಖಣ್ಣ ಹಡಪದ, ಕೊಟ್ರಪ್ಪ ಹಡಪದ, ಈರಪ್ಪ ಹಡಪದ, ಲಕ್ಷಿಕಾಂತ ಬಾವಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.