ADVERTISEMENT

ಲಕ್ಷ್ಮೇಶ್ವರ | ದೊಡ್ಡೂರು ಗ್ರಾಮದಲ್ಲಿ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 15:52 IST
Last Updated 6 ಜೂನ್ 2024, 15:52 IST
ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮದ ಸುತ್ತಮುತ್ತ ಗುರುವಾರ ಬಿರುಸಿನ ಮಳೆ ಸುರಿದ ಹಿನ್ನೆಲೆಯಲ್ಲಿ ಗ್ರಾಮದ ಹತ್ತಿರದ ಹಳ್ಳ ತುಂಬಿ ಹರಿಯಿತು
ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮದ ಸುತ್ತಮುತ್ತ ಗುರುವಾರ ಬಿರುಸಿನ ಮಳೆ ಸುರಿದ ಹಿನ್ನೆಲೆಯಲ್ಲಿ ಗ್ರಾಮದ ಹತ್ತಿರದ ಹಳ್ಳ ತುಂಬಿ ಹರಿಯಿತು   

ಲಕ್ಷ್ಮೇಶ್ವರ: ತಾಲ್ಲೂಕಿನ ದೊಡ್ಡೂರು ಗ್ರಾಮದ ಸುತ್ತಮುತ್ತ ಗುರುವಾರ ಬಿರುಸಿನ ಮಳೆ ಸುರಿಯಿತು.

ಜೋರು ಮಳೆಗೆ ಗ್ರಾಮದ ಮುಂದಿನ ಬೃಹತ್ ಹಳ್ಳ ತುಂಬಿ ಹರಿದ ಪರಿಣಾಮ ಅರ್ಧ ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಅದರಂತೆ ಮಳೆಗೆ ಗ್ರಾಮದ ಕೆರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ಕೃಷಿಹೊಂಡಗಳು ತುಂಬಿಕೊಂಡಿವೆ.

‘ದೊಡ್ಡೂರು ಗ್ರಾಮದ ಹತ್ತಿರ ಲಕ್ಷ್ಮೇಶ್ವರ -ದೊಡ್ಡೂರು ಮಧ್ಯದಲ್ಲಿ ಹರಿದಿರುವ ಹಳ್ಳಕ್ಕೆ ನಿರ್ಮಿಸಿರುವ ಪೇವ್‍ಡಿಪ್ ಕುಸಿದಿದೆ. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿ ಹಳ್ಳ ಕಟ್ಟಿ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು’ ಎಂದು ಗ್ರಾಮದ ನಿವಾಸಿ ಮಲ್ಲೇಶ ಮಣ್ಣಮ್ಮನವರ ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.