ADVERTISEMENT

ನರೇಗಲ್‌ನಲ್ಲಿ ಅಪರೂಪದ ಬಿಲ ಕಪ್ಪೆ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 13:39 IST
Last Updated 28 ಫೆಬ್ರುವರಿ 2020, 13:39 IST
ನರೇಗಲ್ ಪಟ್ಟಣದ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯ ಆವರಣದಲ್ಲಿ ಪತ್ತೆಯಾಗಿರುವ ಬೀಲದ ಕಪ್ಪೆ
ನರೇಗಲ್ ಪಟ್ಟಣದ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯ ಆವರಣದಲ್ಲಿ ಪತ್ತೆಯಾಗಿರುವ ಬೀಲದ ಕಪ್ಪೆ   

ನರೇಗಲ್: ಅಪರೂಪದ ಬಿಲ ಕಪ್ಪೆಯೊಂದು (Indian burrowing frog) ಪಟ್ಟಣದ ಬಸವೇಶ್ವರ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ಪತ್ತೆಯಾಗಿದೆ.

ಶಾಲಾ ಆವರಣವನ್ನು ಸ್ವಚ್ಚಗೊಳಿಸುತ್ತಿರುವಾಗ ಸಿಬ್ಬಂದಿ ಕಣ್ಣಿಗೆ ಈ ಕಪ್ಪೆ ಕಾಣಿಸಿದೆ. ಸಣ್ಣ ತಲೆ ಮತ್ತು ದುಂಡನೆಯ ದೇಹ ರಚನೆ ಹೊಂದಿರುವ ಈ ಕಪ್ಪೆಯನ್ನು ಕಂಡು ಕುತೂಹಲಗೊಂಡ ಸಿಬ್ಬಂದಿ ತಕ್ಷಣವೇ, ಅದನ್ನು ಕಾಲೇಜಿನ ಪ್ರಾಚಾರ್ಯರ ಗಮನಕ್ಕೆ ತಂದರು.

ಬಿಲ ಕಪ್ಪೆಗಳು ಸಾಮಾನ್ಯವಾಗಿ ಒಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಕಪ್ಪೆಗಳು ತಮ್ಮ ಹಿಂಗಾಲುಗಳಿಂದ ಸುಮಾರು 1.5 ಅಡಿಯಷ್ಟು ಆಳದಲ್ಲಿ ಬಿಲ ತೋಡುತ್ತವೆ. 'ನರೇಗಲ್‌ ಭಾಗದಲ್ಲಿ ಇದು ಅಪರೂಪಕ್ಕೆ ಕಾಣಿಸಿಕೊಂಡಿದ್ದು, ಅಚ್ಚರಿ ಮೂಡಿಸಿದೆ’ ಎಂದು ಶಾಲೆಯ ಪ್ರಾಚಾರ್ಯ ಜಿ.ಪಿ.ಕುಲಕರ್ಣಿ ಹೇಳಿದರು.

ADVERTISEMENT

‘ಕಪ್ಪೆಗಳು ಜಲ ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳ ಸಂತತಿ ಸಂರಕ್ಷಣೆ ಅವಶ್ಯ’ ಎಂದು ಪರಿಸರ ತಜ್ಞ ಮಂಜುನಾಥ ನಾಯಕ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.