ADVERTISEMENT

ಯುವಕರು ದೇಶಸೇವೆಗೆ ಮುಂದಾಗಿ: ನಿವೃತ್ತ ನ್ಯಾಯಾದೀಶ ನಾಗರಾಜ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:45 IST
Last Updated 3 ಅಕ್ಟೋಬರ್ 2025, 4:45 IST
ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಭಕ್ತರು ಆಯುಧ ಪೂಜೆ ನೆರವೇರಿಸಿದರು
ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಭಕ್ತರು ಆಯುಧ ಪೂಜೆ ನೆರವೇರಿಸಿದರು   

ಮುಂಡರಗಿ: ‘ಅಪ್ರಮಾಣಿಕತೆ, ಭ್ರಷ್ಟಾಚಾರ ದೇಶದ ಅಭಿವೃದ್ದಿಗೆ ಮಾರಕವಾಗಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ಯುವಕರು ಪ್ರಾಮಾಣಿಕತೆಯಿಂದ ದೇಶ ಸೇವೆಗೆ ಮುಂದಾಗಬೇಕು’ ಎಂದು ನಿವೃತ್ತ ನ್ಯಾಯಾದೀಶ ನಾಗರಾಜ ಅರಳಿ ಹೇಳಿದರು.

ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯುಧ ಪೂಜೆ ಹಾಗೂ ದಸರಾ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ‘ಶರಣರ ವಚನಗಳಲ್ಲಿ ನಮ್ಮ ಬದುಕಿಗೆ ಬೇಕಾಗಿರುವ ಉತ್ತಮ ಮೌಲ್ಯಗಳು ಅಡಗಿದ್ದು, ಯುವಕರು ವಚನ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಡಾ. ವೀರಯ್ಯ ಹಿರೇಮಠ ಮಾತನಾಡಿದರು. ಅನ್ನದಾನೀಶ್ವರ ಸ್ವಾಮೀಜಿ ಶಿವಾನುಭವದ ಸಾನ್ನಿಧ್ಯ ವಹಿಸಿದ್ದರು. ಅನ್ನಪೂರ್ಣಮ್ಮ ಶಿವಶೆಟ್ಟರ, ಎಂ.ಎಸ್. ಶಿವಶಟ್ಟರ, ಶೈಲಜಾ ಅರಳಲೆಮಠ ಅವರನ್ನು ಶ್ರೀಗಳು ಸನ್ಮಾನಿಸಿದರು.

ADVERTISEMENT

ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಎಸ್.ಆರ್. ರಿತ್ತಿ ನಿರೂಪಿಸಿ, ವಂದಿಸಿದರು. ಆರ್.ಎಲ್. ಪೋಲೀಸಪಾಟೀಲ, ಎಂ.ಜಿ. ಗಚ್ಚಣ್ಣವರ, ವಿ.ಎಫ್. ಗುಡದಿರಪ್ಪ, ಬಿ.ಜೆ. ಜವಳಿ, ಆರ್.ಬಿ. ಡಂಬಳಮಠ, ಬಸವರಾಜ ಬನ್ನಿಕೊಪ್ಪ, ಎನ್.ಎಫ್. ಅಕ್ಕೂರ, ಎಸ್.ಸಿ. ಚಕ್ಕಡಿಮಠ, ಹಾಲಯ್ಯ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.