ADVERTISEMENT

‘ನನ್ನ ತೆರಿಗೆ, ನನ್ನ ಹಕ್ಕು’ ಹೋರಾಟದತ್ತ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 6:56 IST
Last Updated 27 ಫೆಬ್ರುವರಿ 2024, 6:56 IST
<div class="paragraphs"><p>ವೆಂಕನಗೌಡ ಗೋವಿಂದಗೌಡ್ರ</p></div>

ವೆಂಕನಗೌಡ ಗೋವಿಂದಗೌಡ್ರ

   

ಗದಗ: ‘ಜಿಲ್ಲೆಯ ಅಭಿವೃದ್ಧಿ ಹಿನ್ನಡೆಗೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದ್ದು, ‘ರಿವರ್ಸ್‌ ಡೆವಲಪ್‌ಮೆಂಟ್‌’ ಖಂಡಿಸಿ ಮಂಗಳವಾರ ನಗರದ ಗಾಂಧಿ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ‘ಹಿನ್ನಡಿಗೆ’ (ರಿವರ್ಸ್‌ ವಾಕ್‌) ಮಾಡಿಕೊಂಡು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಲೇ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ದೆಹಲಿಗೆ ಹೋಗಿ
ಪ್ರತಿಭಟಿಸಿತ್ತು. ಹಾಗಾ‌ದರೆ, ಗದಗ
ಜಿಲ್ಲೆಯಿಂದ ವಾರ್ಷಿಕ ₹450 ರಿಂದ ₹500 ಕೋಟಿ ತೆರಿಗೆ ಹೋಗುತ್ತದೆ. ಆದರೆ, ಪ್ರಸ್ತುತ ರಾಜ್ಯ ಬಜೆಟ್‍ನಲ್ಲಿ ಗದಗ ಜಿಲ್ಲೆಗೆ ಘೋಷಿಸಿದ ಯೋಜನೆಗಳಿಗೆ ₹20 ಕೋಟಿಗಿಂತ ಹೆಚ್ಚು ಅನುದಾನ ಬಂದಿಲ್ಲ. ನಮ್ಮ ಜಿಲ್ಲೆಯಿಂದ
ಪಡೆದ ತೆರಿಗೆ ನಮಗೇಕೆ ನೀಡುತ್ತಿಲ್ಲ. ಅದಕ್ಕಾಗಿ ಜಿಲ್ಲಾ ಜೆಡಿಎಸ್ ‘ನನ್ನ ತೆರಿಗೆ, ನನ್ನ ಹಕ್ಕು’ ಹೋರಾಟ ಪ್ರಾರಂಭಿಸಲಿದೆ. ನಮ್ಮ ಹಕ್ಕು ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಗದಗ ಜಿಲ್ಲೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ನೀಡಿಲ್ಲ, ಈ ಬಗ್ಗೆ ಸಚಿವರು ಹೆಚ್ಚು ಗಮನ ಹರಿಸಿಲ್ಲ’ ಎಂದು ದೂರಿದರು.

‘ಈಗಾಗಲೇ ಗದಗ-
ಬೆಟಗೇರಿ ಅವಳಿ ನಗರ ಸೇರಿ ರಾಜ್ಯದಲ್ಲಿ ಕುಡಿಯುವ ನೀರಿನ ಬಗ್ಗೆ ಹಾಹಾಕಾರ ಶುರುವಾಗಿದೆ. ಇದರ ಮಧ್ಯೆ ₹250ರಿಂದ ₹300 ಇದ್ದ ಟ್ಯಾಂಕರ್ ನೀರು ಇದೀಗ ಮಾಫಿಯಾದಿಂದಾಗಿ ಡಬಲ್ ದರಕ್ಕೆ ಏರಿದೆ. ಕೂಡಲೇ ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ಎಂ.ಎಸ್.ಪರ್ವತಗೌಡ್ರ ಮಾತನಾಡಿ, ‘ಗದಗ –ಬೆಟಗೇರಿ ಅವಳಿ ನಗರದಲ್ಲಿ ಬೇಸಿಗೆ ಪೂರ್ವದಲ್ಲಿಯೇ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಮೈಲಾರ ಜಾತ್ರೆಗಾಗಿ ತುಂಗಭದ್ರಾ ನದಿಗೆ ನೀರು ಬಿಡಲಾಗುತ್ತದೆ. ಆದರೆ, ಸಚಿವ ಎಚ್.ಕೆ.ಪಾಟೀಲ ಅವಳಿ‌ ನಗರದ ನೀರಿನ‌ ಸಮಸ್ಯೆ ನೀಗಿಸಲು ನದಿಗೆ ನೀರು ಬಿಡಿಸಿದ್ದೇನೆ ಎಂದು ‘ಕ್ರೆಡಿಟ್’ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷದ ಗದಗ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಅಪ್ಪಣ್ಣವರ ಮಾತನಾಡಿ, ‘ಗದಗ-ಬೆಟಗೇರಿ ನಗರಸಭೆಯಿಂದ ಟ್ಯಾಂಕರ್ ನೀರು ಪೂರೈಕೆಯಲ್ಲಿ ಗೋಲ್‌
ಮಾಲ್ ನಡೆಯಲಿದೆ. ಪೂರೈಸಿದ
ಟ್ಯಾಂಕರ್‌ಗಿಂತಲೂ ಎರಡು-ಮೂರು ಪಟ್ಟು ನಗರಸಭೆಯಲ್ಲಿ ಖರ್ಚು ಹಾಕು
ತ್ತಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್‌ ಮುಖಂಡರಾದ ಪ್ರಫುಲ್ ಪುಣೇಕರ, ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ದೇವಪ್ಪ ಮಲ್ಲಸಮುದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.