ಗದಗ: ಸರ್ಕಾರವು ರಾಮಚಂದ್ರಸಾ ನಾಗೇಂದ್ರಸಾ ಬಾಕಳೆ ಹಾಗೂ ಇತರರ ವಿರುದ್ಧ ದಾಖಲಿಸಿದ್ದ ಮೊಕದ್ದಮೆ (ಸಿ.ಸಿ. ನಂ. 456/1993) ಗದಗ ಜಿಲ್ಲೆಯ 1ನೇ ಅಧಿಕ ದಿವಾಣಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2002ರ ಮೇ 16ರಂದು ವಿಲೇವಾರಿಯಾಗಿದೆ.
ಈ ಪ್ರಕರಣಕ್ಕೆ ಸಾಕ್ಷಿದಾರರಾಗಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಡ್ ರೇಸ್ ಎಲೆಕ್ಟ್ರಾನಿಕ್ಸ್, ಬಿ.ಎಚ್.ರಸ್ತೆ, 2ನೇ ತಿರುವಿನ ನಿವಾಸಿಗಳಾದ ಜಗದೀಶ ರಾಜಶೇಖರಯ್ಯ, ಶಿವಶಂಕರ ನಾಗಪ್ಪ, ಮಂಜುನಾಥ ಎಚ್. ಕೆ. ಸುಬ್ಬರಾವ್ ಅವರಿಗೆ ನ್ಯಾಯಾಲಯದಲ್ಲಿ ಜಪ್ತಾದ ಮುದ್ದೆಮಾಲು ₹70 ಸಾವಿರವನ್ನು ಸಮನಾಗಿ ನೀಡಲು ಆದೇಶಿಸಿದೆ.
‘ಸಾಕ್ಷಿದಾರರಿಗೆ ಅನೇಕ ಬಾರಿ ನೋಟಿಸ್ ನೀಡಿದ್ದರೂ ಹಾಜರಾಗಿಲ್ಲ. ಇದೇ ಫೆ.26ರಂದು ಬೆಳಿಗ್ಗೆ 11ಕ್ಕೆ ಸಾಕ್ಷಿದಾರರು ನೇರವಾಗಿ ಅಥವಾ ಅವರ ವಕೀಲರ ಮುಖಾಂತರ ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲವಾದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಗದಗ ಜಿಲ್ಲೆಯ 1ನೇ ಅಧಿಕ ದಿವಾಣಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.