ADVERTISEMENT

ಕಲಬುರ್ಗಿ ಅವರಿಗೆ ಮರಣೋತ್ತರ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 18:53 IST
Last Updated 29 ಸೆಪ್ಟೆಂಬರ್ 2025, 18:53 IST
ಎಂ.ಎಂ.ಕಲಬುರ್ಗಿ 
ಎಂ.ಎಂ.ಕಲಬುರ್ಗಿ    

ಗದಗ: ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ನೆನಪಿನಲ್ಲಿ ನೀಡುವ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ಈ ಬಾರಿ ಮರಣೋತ್ತರವಾಗಿ ಸಂಶೋಧಕ ಪ್ರೊ. ಎಂ.ಎಂ.ಕಲಬುರ್ಗಿ ಅವರಿಗೆ ನೀಡಲಾಗುವುದು.

‘ಪ್ರಶಸ್ತಿ ₹ 5 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ’ ಎಂದು ಮಠದ ಕಾರ್ಯದರ್ಶಿ ಎಸ್‌.ಎಸ್‌.ಪಟ್ಟಣಶೆಟ್ಟರ ತಿಳಿಸಿದ್ದಾರೆ. ಮಠದಲ್ಲಿ ಅ. 3ರಂದು ನಡೆಯುವ ಸಿದ್ಧಲಿಂಗ ಶ್ರೀಯವರ ಏಳನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಪ್ರಶಸ್ತಿ ಸ್ವೀಕರಿಸುವರು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT