ನರಗುಂದ: ‘ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಉಗಮದಿಂದ ಕನ್ನಡ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ. ಕನ್ನಡ ಶಾಲೆ ಉಳಿಸುವ ಕಾರ್ಯ ಆಗಬೇಕಿದೆ’ ಎಮದು ಪದ್ಮಶ್ರೀ ಪುರಸ್ಕೃತ ಎ.ಆಯ್ ನಡಕಟ್ಟಿನ ಹೇಳಿದರು.
ತಾಲ್ಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಈಚೆಗೆ ನಡೆದ 374ನೇ ಮಾಸಿಕ ಶಿವಾನುಭವ ಹಾಗೂ ಶಿಕ್ಷಕಕರ ದಿನಾಚರಣೆಯಲ್ಲಿ ಮಾತನಾಡಿದರು.
ನಿವೃತ್ತ ಶಿಕ್ಷಕಿ ವಿಜಯಲಕ್ಷ್ಮಿ ಘಾಳಿ ಮಾತನಾಡಿದರು. ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು.
ಅರ್ಜುನ ಗೊಳಸಂಗಿ, ಜನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ, ಗಂಗಾದರ ಘಾಳಿ, ಹನಮಂತಪ್ಪ ಸುಣಗದ, ಶಿಕ್ಷಕ ಈರಯ್ಯ ನಾಗಲೋಟಿಮಠ, ಮುಖ್ಯಶಿಕ್ಷಕ ಎಸ್.ಎಸ್. ಪಾಟೀಲ, ಚಂದ್ರಕಲಾ ನರಸಾಪೂರ, ಆರ್.ಬಿ. ಚಿನಿವಾಲರ, ಶಿಕ್ಷಕ ಅಮರೇಶ ತೆಗ್ಗಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.