ಲಕ್ಕುಂಡಿ: ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿ ಮುಖ್ಯಮಂತ್ರಿ ಪದಕದ ಗೌರವ ಪಡೆದ ಪೋಲಿಸ್ ಸಿಬ್ಬಂದಿಯನ್ನು ಲಕ್ಕುಂಡಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.
ಲಕ್ಕುಂಡಿ ಗ್ರಾಮ ಪಂಚಾಯಿತಿ ಸದಸ್ಯ ರುದ್ರಪ್ಪ ಮುಸ್ಕಿನಭಾವಿ ಅವರ ನೇತೃತ್ವದಲ್ಲಿ ಅವರ ಮನೆಯ ಆವರಣದಲ್ಲಿ ಗದಗ ಗ್ರಾಮೀಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಲ್.ಕೆ.ಜೂಲಿಕಟ್ಟಿ, ಹವಾಲ್ದಾರ್ ಬಸವರಾಜ ಗುಡ್ಲಾನೂರ, ಆನಂದಸಿಂಗ್ ದೊಡ್ಡಮನಿ, ಪ್ರವೀಣ ಕಲ್ಲೂರ ಅವರನ್ನು ಗೌರವಿಸಲಾಯಿತು.
ಗ್ರಾಮದ ಹಿರಿಯರಾದ ಬಸಪ್ಪ ರೇವಡಿ, ಹಾಲ್ಲಪ್ಪ ಮುಸ್ಕಿನಭಾವಿ, ಗವಿಶಿದ್ದಪ್ಪ ರೇವಡಿ, ಸಣ್ಣೀರಪ್ಪ ಮುಸ್ಕಿನಭಾವಿ, ವೀರಯ್ಯ ಗಂಧದ, ಮಹೇಶ ಮುಸ್ಕಿನಭಾವಿ, ಮಹಾದೇವಪ್ಪ ಕವಲೂರು, ಮಹಮ್ಮದ್‌ರಫೀಕ್ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.