ADVERTISEMENT

ಲಕ್ಕುಂಡಿ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 22:33 IST
Last Updated 29 ಜನವರಿ 2026, 22:33 IST
   

ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿರುವ ಉತ್ಖನನದಲ್ಲಿ ಮೂರು ಹೆಡೆಯ ನಾಗಶಿಲ್ಪ, ಮೂಳೆ ತುಂಡುಗಳು ಸಿಕ್ಕಿವೆ.

‘ಉತ್ಖನನ ಕೆಲಸ ಗುರುವಾರಕ್ಕೆ 12 ದಿನಗಳನ್ನು ಪೂರ್ಣಗೊಳಿಸಿದೆ. ಮೂರು ಹೆಡೆಯ ನಾಗ ಶಿಲ್ಪದ ಜತೆಗೆ ಕಳಸದ ಮೇಲ್ಭಾಗದಲ್ಲಿ ಇರುವ ರಚನೆಯ ಅವಶೇಷ, ಮೂಳೆ ತುಂಡುಗಳು ಸಿಕ್ಕಿವೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT