ADVERTISEMENT

ಖರೀದಿ ಕೇಂದ್ರ ಆರಂಭಿಸಲು ಆಗ್ರಹ: ಮೆಕ್ಕೆಜೋಳ ರಸ್ತೆ ಮೇಲೆ ಸುರಿದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:13 IST
Last Updated 24 ನವೆಂಬರ್ 2025, 5:13 IST
ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್‍ನಲ್ಲಿ ಭಾನುವಾರ ರೈತರು ಮೆಕ್ಕೆಜೋಳ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು
ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್‍ನಲ್ಲಿ ಭಾನುವಾರ ರೈತರು ಮೆಕ್ಕೆಜೋಳ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು   

ಲಕ್ಷ್ಮೇಶ್ವರ: ಪಟ್ಟಣದ ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆ ವತಿಯಿಂದ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ನಡೆಸಿದ ಅಹೋರಾತ್ರಿ ಧರಣಿಯು ದಿನದಿಂದ ದಿನಕ್ಕೆ ಉಗ್ರಸ್ವರೂಪ ಪಡೆದುಕೊಳ್ಳುತ್ತಿದೆ.

ಭಾನುವಾರ ರೈತರು ಪಟ್ಟಣದ ಶಿಗ್ಲಿ ನಾಕಾದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಮೆಕ್ಕೆಜೋಳ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಧರಣಿ ನೇತೃತ್ವ ವಹಿಸಿದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ ಮಾತನಾಡಿ, ‘ಕುಮಾರ ಮಹಾರಾಜರು ನಡೆಸಿದ ಉಪವಾಸ ಸತ್ಯಾಗ್ರಹ ಬಿಡಿಸುವ ಸಲುವಾಗಿ ಅಧಿಕಾರಿಗಳು ನಾಟಕ ಮಾಡಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.

ADVERTISEMENT

ಈ ವೇಳೆ ಶರಣು ಗೋಡಿ, ಎಂ.ಎಸ್. ದೊಡ್ಡಗೌಡರ, ಬಸಣ್ಣ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ಮಹೇಶ ಹೊಗೆಸೊಪ್ಪಿನ, ಚೆನ್ನಪ್ಪ ಷಣ್ಮುಖಿ, ನಾಗರಾಜ ಗೌರಿ, ಸುರೇಶ ಹಟ್ಟಿ, ನಾಗಪ್ಪ ಓಂಕಾರಿ, ಶಿವಾನಂದ ನಿಂಗಶೆಟ್ಟಿ, ಯಲ್ಲಪ್ಪ ದೇವಪ್ಪ ಮಾಳಗಿಮನಿ, ಟಾಕಪ್ಪ ಸಾತಪುತೆ, ಗುರಪ್ಪ ಮುಳಗುಂದ, ನೀಲಪ್ಪ ಶೆರಸೂರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.