
ಪ್ರಜಾವಾಣಿ ವಾರ್ತೆ
ಲಕ್ಷ್ಮೇಶ್ವರ: ವಿಧಾನಪರಿಷತ್ ಸದಸ್ಯ ಎಂ.ನಾಗರಾಜ ಯಾದವ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಾಲ್ಲೂಕು ಯಾದವ ಸಮುದಾಯದ ಮುಖಂಡರು ಆಗ್ರಹಿಸಿದರು.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ಹಿರಿಯ ರಾಜಕಾರಣಿ ಎಂ.ನಾಗರಾಜ ಯಾದವ ಅವರಿಗೆ ಸಚಿವ ನೀಡುವ ಮೂಲಕ ಯಾದವ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಸಚಿವ ಸ್ಥಾನ ನೀಡಬೇಕು’ ಎಂದು ಹನಮಂತಪ್ಪ ಮೇಗಲಮನಿ, ನೀಲಪ್ಪ ಪಾಟೀಲ, ಮುದಕಪ್ಪ ಗೊಲ್ಲರ, ಚನ್ನಪ್ಪಗೌಡ ಗೊಲ್ಲರ, ನವೀನ ಕರೆಣ್ಣವರ, ಸೋಮಲಿಂಗ ಗೊಲ್ಲರ, ಸುಭಾಷ ಮೇಗಲಮನಿ, ಈರಣ್ಣ ಮೇಗಲಮನಿ, ಮಾಂತೇಶ ಪಾಟೀಲ, ಮಂಜುನಾಥ ಮೇಗಲಮನಿ, ಕೃಷ್ಣ ಗೊಲ್ಲರ, ಭೀಮಣ್ಣ ಪಾಟೀಲ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.