
ಲಕ್ಷ್ಮೇಶ್ವರ: ತಾಲ್ಲೂಕಿನ ಉಳ್ಳಟ್ಟಿಯ ಲಿಟಲ್ ಹಾರ್ಟ್ ಇಂಟರ್ ನ್ಯಾಶನಲ್ ಶಾಲೆ ಬಸ್‍ನಿಂದ ಕೆಳಗೆ ಬಿದ್ದು ಈಚೆಗೆ ಮೃತಪಟ್ಟ ದೊಡ್ಡೂರು ತಾಂಡಾದ ಬಾಲಕನ ಮನೆಗೆ ಶನಿವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಾಲಕ ಓದುತ್ತಿದ್ದ ಶಾಲೆಗೆ ಭೇಟಿ ನೀಡಿದ ಅವರು ವಾಹನ ತಪಾಸಣೆ ಹಾಗೂ ಸಭೆ ನಡೆಸಿ, ‘ವಾಹನ ಚಾಲಕರ ನೇಮಕ, ಮುಂಜಾಗ್ರತೆ ಕ್ರಮ ಹಾಗೂ ಕಾಲ ಕಾಲಕ್ಕೆ ಶಾಲಾ ವಾಹನ ತಪಾಸಣೆ ಕುರಿತು ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರಪಿಕಾ ಹಳ್ಳೂರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಸಂಶಿ, ಸಿಡಿಪಿಒ ಮೃತ್ಯುಂಜಯಪ್ಪ ಗುಡ್ಡದನ್ವೇರಿ, ಸಿಪಿಐ ಬಿ.ವಿ. ನ್ಯಾಮನಗೌಡ, ಬಿಇಒ ಎಚ್.ಎನ್. ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.