
ಮುಂಡರಗಿ: ‘ಭಾವನೆಗಳ ವಿನಿಮಯ ಹಾಗೂ ಸಂವಹನಕ್ಕೆ ಭಾಷೆ ಅಗತ್ಯವಾಗಿದ್ದು, ಮಾತೃಭಾಷೆಯಲ್ಲಿ ಮಾತ್ರ ಭಾವನೆ ವ್ಯಕ್ತಪಡಿಸಲು ಸಾಧ್ಯ’ ಎಂದು ಕ್ಷೇತ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.
ಇಲ್ಲಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ತಾಲ್ಲೂಕು ಶಾಲಾ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಫರ್ಧೆ ಉದ್ಘಾಟಿಸಿ ಅವರು ಮತನಾಡಿದರು.
‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಾಷೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ ಭಾಷಾ ಪ್ರೇಮ ಮೈಗೂಡಿಸಿಕೊಳ್ಳಬೇಕು. ಇಂತಹ ಸ್ಫರ್ಧೆಗಳು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ’ ಎಂದರು.
ವಿದ್ಯಾ ಸಮಿತಿಯ ಉಪಾಧ್ಯಕ್ಷ ಎಸ್.ವಿ.ಪಾಟೀಲ ಮಾತನಾಡಿದರು. ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ವಿ. ಸೀತಾರಾಮರಾಜು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ನೂತನ ಸದಸ್ಯ ಮುತ್ತು ಹಾಳಕೇರಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ದೇವರಡ್ಡಿ ಇಮ್ರಾಪೂರ ಸ್ವಾಗತಿಸಿದರು. ಆಡಳಿತಾಧಿಕಾರಿ ಸಿ.ಎಸ್. ಅರಸನಾಳ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿದರು. ಶಿಕ್ಷಕ ಚಿಲವಾಡಗಿ ವಂದಿಸಿದರು.
ಈಶ್ವರಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ಎಂ.ಜಿ. ಗಚ್ಚಣ್ಣವರ, ಪಿ.ಮನೋಹರ, ಆರ್.ಎಲ್. ಪೊಲೀಸಪಾಟೀಲ, ಎಂ.ಎಂ. ಹೆಬ್ಬಾಳ, ಹನುಮರಡ್ಡಿ ಇಟಗಿ, ಪರಮೇಶ ನಾಯಕ ಇದ್ದರು.
ಸ್ಪರ್ಧೆ ಫಲಿತಾಂಶ: ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆ ವಿದ್ಯಾರ್ಥಿನಿ ಅರ್ಚನಾ ಭಜಮ್ಮನವರ ಪ್ರಥಮ, ಜೆ.ಎ. ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿ ಸುಮನ್ ಜಾಟ್ ದ್ವ್ವಿತೀಯ, ಎಸ್ಎಫ್‌ಎಸ್ ಪ್ರೌಢಶಾಲೆ ವಿದ್ಯಾರ್ಥಿ ತನುಶ್ರೀ ಆರ್. ಹಾಗೂ ಜೆ.ಟಿ. ಕೋಟೆ ಪ್ರೌಢಶಾಲೆ ವಿದ್ಯಾರ್ಥಿ ಮಾಳವ್ವ ಚಿಕ್ಕಣ್ಣವರ ತೃತೀಯ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.