ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ರೈತರ ಈರುಳ್ಳಿ ಬೆಳೆ ಜಲಾವೃತಗೊಂಡು ತೇವಾಂಶ ಅಧಿಕವಾಗಿ ಕೊಳೆತು ಹೋಗುತ್ತಿದ್ದು, ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ.
ತಾಲ್ಲೂಕಿನ ಅಡರಕಟ್ಟಿ ಗ್ರಾಮದ ಈರುಳ್ಳಿ ಬೆಳೆಗಾರರಾದ ಸಿದ್ದು ಹವಳದ, ಪ್ರಶಾಂತ ಹವಳದ, ಶಿವಾನಂದ ಹವಳದ, ಮೌನೇಶ ಹವಳದ, ರಾಮಣ್ಣ ಚಿಕ್ಕಣ್ಣವರ, ಬಸವರಾಜ ಮಂಟೂರ, ಈಶ್ವರ ಬಂಗಿ ಸೇರಿದಂತೆ ವಿವಿಧ ರೈತರು ಬೆಳೆದ ಈರುಳ್ಳಿ ಬೆಳೆ ಜಲಾವೃತಗೊಂಡು ಕೊಳೆತು ಹಾಳಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಇದೀಗ ನಷ್ಟ ಅನುಭವಿಸುವ ಪರಿಸ್ಥಿತಿ ಉದ್ಭವಿಸಿದೆ.
ಅಡರಕಟ್ಟಿ ಗ್ರಾಮದ ರೈತರು ಪ್ರತಿವರ್ಷ ನೂರಾರು ಎಕರೆಯಲ್ಲಿ ಈರುಳ್ಳಿ ಬೆಳೆಯುತ್ತಾರೆ. ಪ್ರಸ್ತುತ ವರ್ಷ ಆರಂಭದಲ್ಲಿಯೇ ಉತ್ತಮ ಮಳೆ ಆಗಿದ್ದರಿಂದ ಈ ವರ್ಷ ಈರುಳ್ಳಿ ಫಸಲು ಚೆನ್ನಾಗಿ ಬರಬಹುದು ಎಂದು ಕನಸು ಕಂಡಿದ್ದ ರೈತರಲ್ಲಿ ಅಧಿಕ ಮಳೆ ನಿರಾಸೆ ಮೂಡಿಸಿದೆ.
ಅತೀವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ಕೊಳೆತು ಹಾಳಾಗಿದೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡೇವಿ. ಆದರ ಈಗ ಬೆಳಿ ಹಾಳಾಗೇತಿ. ಹಿಂಗಾಗಿ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮೌನೇಶಹವಳದ ಅಡರಕಟ್ಟಿ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.