ADVERTISEMENT

ಗದಗ: ಬೆಳಿಗ್ಗೆ 9:30ರವರೆಗೆ ಶೇ 13.32ರಷ್ಟು ಹಕ್ಕು ಚಲಾವಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 6:21 IST
Last Updated 31 ಆಗಸ್ಟ್ 2018, 6:21 IST
ಲಕ್ಷ್ಮೇಶ್ವರ ಪುರಸಭೆ ಚುನಾವಣೆಗೆ ಮತ ಚಲಾಯಿಸಲು ಬೂತ್ ನಂಬರ್‌ 12ರಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿರುವ ಮತದಾರರು
ಲಕ್ಷ್ಮೇಶ್ವರ ಪುರಸಭೆ ಚುನಾವಣೆಗೆ ಮತ ಚಲಾಯಿಸಲು ಬೂತ್ ನಂಬರ್‌ 12ರಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿರುವ ಮತದಾರರು   

ಗದಗ: ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳ 123 ವಾರ್ಡ್‌ಗಳ ಚುನಾವಣೆಗೆ ನಡೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ 9:30ರವರೆಗೆ ಶೇ 13.32ರಷ್ಟು ಮತದಾನ ಆಗಿದೆ.

ಲಕ್ಷ್ಮೇಶ್ವರ ಪುರಸಭೆಯ 23 ವಾರ್ಡುಗಳಿಗೆ 81 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 14940 ಮಹಿಳೆ ಹಾಗೂ 15037 ಪುರುಷ ಮತದಾರರಿದ್ದಾರೆ. ಹೆಚ್ಚುವರಿ 8 ಸೇರಿದಂತೆ ಒಟ್ಟು 31 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು 124 ಮತಗಟ್ಟೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿರಹಟ್ಟಿ ಪಟ್ಟಣ ಪಂಚಾಯ್ತಿಯ 18 ವಾರ್ಡುಗಳಿಗೆ 62 ಅಭ್ಯರ್ಥಿಗಳು ಕಣದಲ್ಲಿದ್ದು, 6,905 ಮಹಿಳೆ ಹಾಗೂ 6,894 ಪುರುಷ ಮತದಾರರಿದ್ದಾರೆ. 18 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 72 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಳಗುಂದ ಪಟ್ಟಣ ಪಂಚಾಯ್ತಿ 19 ವಾರ್ಡುಗಳಿಗೆ 54 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 7040 ಮಹಿಳೆ 7303 ಪುರುಷ ಮತದಾರರಿದ್ದಾರೆ. 19 ಮತಗಟ್ಟೆ ಸ್ಥಾಪಿಸಲಾಗಿದೆ. 76 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ರೋಣ ಪುರಸಭೆಯ 23 ವಾರ್ಡಗಳಿಗೆ 55 ಅಭ್ಯರ್ಥಿಗಳಿದ್ದು ಕಣದಲ್ಲಿದ್ದು, 9721 ಮಹಿಳೆ, 9354 ಪುರುಷ ಮತದಾರರಿದ್ದಾರೆ. 23 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು 92 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಜೇಂದ್ರಗಡ ಪುರಸಭೆಯ 23 ವಾರ್ಡುಗಳಿಗೆ 56 ಅಭ್ಯರ್ಥಿಗಳಿದ್ದು, 12,455 ಮಹಿಳೆ, 12514 ಪುರುಷ ಮತದಾರರಿದ್ದಾರೆ. 27 ಮತಗಟ್ಟೆ ಸ್ಥಾಪಿಸಲಾಗಿದೆ. 108 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನರೇಗಲ್ಲ ಪಟ್ಟಣ ಪಂಚಾಯ್ತಿಯ 17 ವಾರ್ಡುಗಳಿಗೆ 52 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 6,708 ಮಹಿಳೆ, 6,653 ಪುರುಷ ಮತದಾರರಿದ್ದಾರೆ. 18 ಮತಗಟ್ಟೆ ಸ್ಥಾಪಿಸಲಾಗಿದೆ. 72 ಮತಗಟ್ಟೆ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮುಳಗುಂದ ಮತ್ತು ಶಿರಹಟ್ಟಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.