ಗದಗ: ವಿಶ್ವ ಮಧ್ವ ಮಹಾ ಪರಿಷತ್ ಜಿಲ್ಲಾ ಶಾಖೆಯಿಂದ ನಗರದ ವೀರನಾರಾಯಣ ದೇವಸ್ಥಾನದಲ್ಲಿ ಜ.19ರಿಂದ 27ರ ವರೆಗೆ ಶ್ರೀಮನ್ಮಧ್ವ ನವರಾತ್ರೋತ್ಸವ ಕಾರ್ಯಕ್ರಮ ಜರುಗಲಿವೆ.
ಜ.19ರಂದು ಬೆಳಿಗ್ಗೆ 7ಕ್ಕೆ ಮಧ್ವಾಚಾರ್ಯರ ಚಿತ್ರ ಹಾಗೂ ಸರ್ವಮೂಲ ಗ್ರಂಥಗಳ ಸನ್ನಿಧಿಯಲ್ಲಿ ನಂದಾದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಂದು ಸಂಜೆ ಹಾಗೂ ಜ.20ರ ಸಂಜೆ 6.30ಕ್ಕೆ ಬೆಂಗಳೂರಿನ ಪಂ. ವಾಸುದೇವಾಚಾರ್ಯ ಸತ್ತಿಗೇರಿ ಅವರಿಂದ ಇತಿಹಾಸಕ್ಕೆ ಮಧ್ವಾಚಾರ್ಯರ ಕೊಡುಗೆ ಕುರಿತು ಉಪನ್ಯಾಸ ನಡೆಯಲಿದೆ.
ಜ.21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಪಂ. ಪುರಂದರಾಚಾರ್ಯ ಹಯಗ್ರಿವ ಅವರಿಂದ ಭಗವದ್ಗೀತಾ ಪಂಚಮಾಧ್ಯಾಯ ಉಪನ್ಯಾಸ ನಡೆಯಲಿದೆ.
ಜ.22ರಂದು ಸಂಜೆ 6.30ಕ್ಕೆ ಧಾರವಾಡದ ಪಂ. ಕೇಶವಾಚಾರ್ಯ ಕೆರೂರ ಅವರಿಂದ ಭಾಗವತ ತಾತ್ಪರ್ಯ ನಿರ್ಣಯ ಕುರಿತು ಉಪನ್ಯಾಸ ಜರುಗುವುದು.
ಜ.23ರಂದು ಸಂಜೆ 6.30ಕ್ಕೆ ನಗರದ ಪಂ. ರಘೋತ್ತಮಾಚಾರ್ಯ ನಿಲೂಗಲ್ ಅವರಿಂದ ವ್ಯಾಸಾವತಾರ ನಿರ್ಣಯ ಕುರಿತು ಉಪನ್ಯಾಸ ನಡೆಯುವುದು.
ಜ.24ರಂದು ಸಂಜೆ 6.30ಕ್ಕೆ ಬಾಗಲಕೋಟೆಯ ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ ಅವರಿಂದ ವೇದವಾಜ್ಮಯಕ್ಕೆ ಮಧ್ವಾಚಾರ್ಯರ ಕೊಡುಗೆ ವಿಷಯ ಕುರಿತು ಉಪನ್ಯಾಸ, ಜ.25ರಂದು ಸಂಜೆ 6.30ಕ್ಕೆ ಧಾರವಾಡದ ಪಂ.ಪುಷ್ಕರಾಚಾರ್ಯ ಶಿರಹಟ್ಟಿ ಅವರಿಂದ ಉಪನಿಷತ್ತುಗಳಲ್ಲಿ ವಾಯುದೇವರ ಮಹಿಮೆ ಕುರಿತು ಉಪನ್ಯಾಸ ನಡೆಯಲಿದೆ.
ಜ. 26ರಂದು ಬೆಳಿಗ್ಗೆ 6ಕ್ಕೆ ಸುಮಧ್ವವಿಜಯ ಸರ್ವಮೂಲ ಗ್ರಂಥಗಳ ಪಾರಾಯಣ, ವಾಯುಸ್ತುತಿ ಪುನಶ್ಚರಣ ನಡೆಯುವುದು. ಸಂಜೆ 6.30ಕ್ಕೆ ಹುಬ್ಬಳ್ಳಿಯ ಪಂ. ಪಾಂಡುರಂಗಾಚಾರ್ಯ ಹುನಗುಂದ ಅವರಿಂದ ಸದಾಚಾರ ಸ್ಮೃತಿ ಕುರಿತು ಉಪನ್ಯಾಸ ಜರುಗುವುದು.
ಜ. 27ರಂದು ಬೆಳಿಗ್ಗೆ 6ಕ್ಕೆ ಸುಮಧ್ವವಿಜಯ ಸರ್ವಮೂಲ ಗ್ರಂಥಗಳ ಪಾರಾಯಣ, ವಾಯುಸ್ತುತಿ ಪುನಶ್ಚರಣಸಹಿತ ಹೋಮ ಜರುಗುವುದು. 9ಕ್ಕೆ ಮಧ್ವಾಚಾರ್ಯರ ಪ್ರತಿಮೆ ಹಾಗೂ ಸರ್ವಮೂಲ ಗ್ರಂಥಗಳ ಭವ್ಯ ಮೆರವಣಿಗೆ, ಮಂಗಳಾರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ ಜರುಗಲಿದೆ. ಹರೆ ಶ್ರೀನಿವಾಸ ಭಜನಾಮಂಡಳಿ, ರುಕ್ಮಿಣಿ ಭಜನಾಮಂಡಳಿ, ಲಕ್ಷ್ಮೀನಾರಾಯಣ ಭಜನಾಮಂಡಳಿ, ಹರಿಪ್ರಿಯ ಭಜನಾಮಂಡಳಿ ಸಹಕಾರದಲ್ಲಿ ಮೆರವಣಿಗೆ ನಡೆಯಲಿದೆ.
ಸಂಜೆ 6.30ಕ್ಕೆ ನಗರದ ವರದರಾಜಾಚಾರ್ಯ ಹುನಗುಂದ ಅವರಿಂದ ಮಧ್ವಾಚಾರ್ಯರ ಸಂದೇಶ, ಉಪನ್ಯಾಸ, ಹುಬ್ಬಳ್ಳಿಯ ಪಂ. ಪಾಂಡುರಂಗಾಚಾರ್ಯ ಹುನಗುಂದ ಅವರ ಅಧ್ಯಕ್ಷತೆಯಲ್ಲಿ ನಡೆಯುವುದು. ರಾತ್ರಿ 8ಕ್ಕೆ ಮಹಾಮಂಗಳಾರತಿ, ಪ್ರಸಾದ ಸೇವೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.