ADVERTISEMENT

ಮಿಷನ್‌ ಅಂತ್ಯೋದಯ 2020: ಹುಲಕೋಟಿ ಗ್ರಾಮ ಪಂಚಾಯ್ತಿಗೆ ಪ್ರಥಮ ರ‍್ಯಾಂಕ್‌

ರಾಷ್ಟ್ರ ಮಟ್ಟದ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:49 IST
Last Updated 5 ಜನವರಿ 2021, 12:49 IST
ಹುಲಕೋಟಿ ಗ್ರಾಮ ಪಂಚಾಯ್ತಿ
ಹುಲಕೋಟಿ ಗ್ರಾಮ ಪಂಚಾಯ್ತಿ   

ಗದಗ: ಕೇಂದ್ರ ಗಾಮೀಣಾಭಿವೃದ್ಧಿ ಸಚಿವಾಲಯದ ‘ಮಿಷನ್‌ ಅಂತ್ಯೋದಯ 2020’ ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮ ಪಂಚಾಯ್ತಿ ರ‍್ಯಾಂಕಿಂಗ್‌ನಲ್ಲಿ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದೆ.

‘ಮೂಲಸೌಕರ್ಯ ಅಭಿವೃದ್ಧಿ, ಸಾಕ್ಷರತೆ, ಕೃಷಿ, ಪಶುಸಂಗೋಪನೆ, ಕುಡಿಯುವ ನೀರಿನ ಸೌಕರ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ, ರಸ್ತೆ ಅಭಿವೃದ್ಧಿ ಹೀಗೆ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ 141 ಬಗೆಯ ಅಂಶಗಳನ್ನು ಪರಿಗಣಿಸಿ ಗ್ರಾಮ ಪಂಚಾಯ್ತಿಗಳಿಗೆ ಶ್ರೇಣಿ ನೀಡಲಾಗುತ್ತದೆ. ಇದರಲ್ಲಿ ಹುಲಕೋಟಿ ಗ್ರಾಮ ಪಂಚಾಯ್ತಿಯು 100ಕ್ಕೆ 90 ಅಂಕಗಳನ್ನು ಪಡೆದು ರಾಷ್ಟ್ರ ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ’ ಎಂದು ಗದಗ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್‌.ಎಸ್‌.ಜನಗಿ ತಿಳಿಸಿದರು.

‘ಎರಡು ವರ್ಷಗಳಿಂದ ಐದನೇ ಸ್ಥಾನದಲ್ಲಿದ್ದ ಹುಲಕೋಟಿ ಗ್ರಾಮ ಪಂಚಾಯ್ತಿ ಈ ಬಾರಿ ಮೊದಲನೇ ಸ್ಥಾನಕ್ಕೆ ಜಿಗಿದಿದೆ. ಇದರ ಜತೆಗೆ ತೆಲಂಗಾಣದ ಎರಡು ಗ್ರಾಮ ಪಂಚಾಯ್ತಿಗಳು ಕೂಡ ಮೊದಲ ಸ್ಥಾನ ಹಂಚಿಕೊಂಡಿವೆ’ ಎಂದು ಅವರು ತಿಳಿಸಿದರು.

ADVERTISEMENT

‘ಮಿಷನ್‌ ಅಂತ್ಯೋದಯ 2020’ ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಹುಲಕೋಟಿ ಗ್ರಾಮ ಪಂಚಾಯ್ತಿಗೆ ಪ್ರಥಮ ಶ್ರೇಣಿ ದೊರೆತಿರುವುದು ಅತ್ಯಂತ ಸಂತಸ ತಂದಿದೆ. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳು ಇದರಿಂದ ಸ್ಫೂರ್ತಿ ಪಡೆದು ಗ್ರಾಮೀಣ ಜನರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದು ಮಾಜಿ ಶಾಸಕ ಡಿ.ಆರ್‌.ಪಾಟೀಲ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.