
ನರಗುಂದ: ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡುವ ಗುರಿ ವಿಕಸಿತ ಭಾರತ ಯೋಜನೆಯದಾಗಿದೆ. ಈ ಯೋಜನೆಗೆ 2013 ರಲ್ಲಿ 33 ಸಾವಿರ ಕೋಟಿ ಅನುದಾನ ಇತ್ತು. 2025ರ ಹೊತ್ತಿಗೆ ₹ 2.86 ಲಕ್ಷ ಕೊಟಿ ಅನುದಾನವಿಟ್ಟು ವಿಕಸಿತ ಗ್ರಾಮದಿಂದ ವಿಕಸಿತ ಭಾರತ ನಿರ್ಮಾಣದ ಗುರಿ ಹೊಂದಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯಾಜನೆಯಾಗಿದೆ ಎಂದು ಶಾಸಕ ಸಿ ಸಿ ಪಾಟೀಲ ಹೇಳಿದರು.
ತಾಲ್ಲೂಕಿನ ಶಿರೋಳ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ನರಗುಂದ ಮಂಡಲದಿಂದ ಆಶ್ರಯದಲ್ಲಿ ಶುಕ್ರವಾರ ಸಂಜೆ ನಡೆದ ವಿಕಸಿತ ಭಾರತ ವ್ಹಿಬಿ ರಾಮ್ ಜಿ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಇದರಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದಂತಾಗಿದೆ. ಈಗಾಗಲೇ ಕಾನೂನಾಗಿ ರೂಪುಗೊಂಡಿದೆ. ಇದನ್ನು ಬೆಂಬಲಿಸಿ ಮತಕ್ಷೇತ್ರದಾಧ್ಯಂತ ಸಭೆ ಮಾಡುತ್ತೇವೆ ಎಂದರು. ಲೋಕಸಭೆಯಲ್ಲಿ ವ್ಹಿಬಿ ಜಿ ರಾಮ್ ಜಿ ಯೋಜನೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದು, ಕಾನೂನು ಆಗಿ ರೂಪುಗೊಂಡಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಯೋಜನೆ ವಿರೋಧ ಮಾಡುತ್ತಿದೆ ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಬಲ ನೀಡುವ ಮಹತ್ವದ ಹೆಜ್ಜೆಯಾಗಿದೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಡಿಜಿಟಲ್ ಸೌಲಭ್ಯಗಳ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಮತ್ತು ಸಶಕ್ತವಾಗಿಸುವುದು ಇದರ ಮುಖ್ಯ ಉದ್ದೇಶ. ಈ ಗ್ರಾಮೀಣ-ನಗರ ಅಂತರವನ್ನು ಕಡಿಮೆ ಮಾಡಿ, ಸಮೃದ್ಧ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶಾಸಕ ಪಾಟೀಲ ಹೇಳಿದರು.
ನರಗುಂದ ಬಿಜೆಪಿ ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ ಮಾತನಾಡಿ, ಮಹಾತ್ಮಾ ಗಾಂಧಿಜಿ ಆತ್ಮದಲ್ಲಿನ ರಾಮನ ಹೆಸರನ್ನು ವ್ಜಿಬಿ ಜಿ ರಾಮ್ ಜಿ ಯೋಜನೆಗೆ ಇಡಲಾಗಿದೆ. ವಿಕಸಿತ ಭಾರತದ ನಿರ್ಮಾಣವೇ ಈ ಯೋಜನೆಯ ಮುಖ್ಯ ಗುರಿ ಆಗಿದೆ ಎಂದು ಹೇಳಿದರು.
ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿದರು. ಸಭೆಯಲ್ಲಿ ನಿಂಗಣ್ಣ ಗಾಡಿ, ಅಜ್ಜಪ್ಪ ಹುಡೇದ, ನಿಂಗಣ್ಣ ಗಾಡಿ, ಶೇಖರಗೌಡ ಸಾಲಿಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಉಮೇಶಗೌಡ ಪಾಟೀಲ, ಚಂದ್ರು ದಂಡಿನ, ನಿಂಗಪ್ಪ ಸೋಮಾಪೂರ, ಭೀಮಪ್ಪ ಹಾದಿಮನಿ, ತಮ್ಮಣ್ಣ ಮದುಗುಣಿಕಿ, ಹನುಮವ್ವ ಹಿರೇಮನಿ, ಇದ್ದರು.