
ಪ್ರಜಾವಾಣಿ ವಾರ್ತೆ
ಹಣ
ಗದಗ: 2025ನೇ ಸಾಲಿನ ಬಾಬಾಸಾಹೇಬ ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್‌ಗೆ ನಗರದ ಹಿರಿಯ ವಕೀಲ ಮೋಹನ ಎಚ್. ಭಜಂತ್ರಿ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿಯ ಕೆಎಸ್ಎಲ್‌ಯುನ ಸಿಂಡಿಕೇಟ್ ಸದಸ್ಯರು ಹಾಗೂ ಭಜಂತ್ರಿ (ಕೊರಮ) ಸಮಾಜದ ಗದಗ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಮೋಹನ ಎಚ್. ಭಜಂತ್ರಿ ಅವರ ಸಾಮಾಜಿಕ ಸೇವೆ, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರೊಂದಿಗಿನ ಒಡನಾಟ ಹಾಗೂ ಕಾನೂನು ಸೇವೆ ಗುರುತಿಸಿ ದೆಹಲಿಯ ಪ್ರತಿಷ್ಠಿತ ಭಾರತೀಯ ದಲಿತ ಅಕಾಡೆಮಿಯು ಫೆಲೋಶಿಪ್‌ಗೆ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.