ADVERTISEMENT

ನರಗುಂದ | ‘ಮಕ್ಕಳ ಜೀವನಕ್ಕೆ ತಾಯಂದಿರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:25 IST
Last Updated 13 ಮೇ 2025, 14:25 IST
ನರಗುಂದದ ಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಮಾತನಾಡಿದರು
ನರಗುಂದದ ಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಮಾತನಾಡಿದರು    

ನರಗುಂದ: ಅಜ್ಞಾನದ ಅಂದಕಾರವನ್ನು ತೊಲಗಿಸಿ, ಸುಜ್ಞಾನದ ಬೆಳಕನ್ನು ಹರಿಸುವಲ್ಲಿ ತಾಯಿಯ ಕೊಡುಗೆ ಅಪಾರ. ಅಮ್ಮ ಎಂಬ ಅಕ್ಷರದಲ್ಲಿ ಪ್ರಪಂಚವೇ ಅಡಗಿದೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಹೇಳಿದರು.

ಪಟ್ಟಣದ ಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ ಮಂಗಳವಾರ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದರು.

‘ನವಮಾಸ ತನ್ನ ಉದರದಲ್ಲಿ ಹೊತ್ತ ತಾಯಿಯ ಪ್ರೀತಿ ವಾತ್ಸಲ್ಯ ಒಲುಮೆ ಮನುಕುಲದ ಉನ್ನತಿಯ ಚಿಲುಮೆಯಾಗಿದೆ. ಮಕ್ಕಳಿಗೆ ಸೂಕ್ತ ಮಾರ್ಗದಲ್ಲಿ ಮುನ್ನಡೆಸಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುವ ಮಾರ್ಗದರ್ಶಕ ಆತ್ಮವೇ ತಾಯಿ’ ಎಂದರು.

ADVERTISEMENT

ಪ್ರಾಚಾರ್ಯರಾದ ಆರ್.ಬಿ. ಪಾಟೀಲ್ ಮಾತನಾಡಿ, ‘ತಾಯಿ ತನ್ನ ಹಸಿವು ದಣಿವು ಮರೆತು ಮಕ್ಕಳ ಸಂತೋಷ ಗೆಲುವಿಗೆ ಸ್ಪಂಧಿಸುತ್ತಾಳೆ. ಮಗುವಿನ ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿರ್ಮಿಸುವ ಮೂಲಾಧಾರವೇ ತಾಯಿ’ ಎಂದರು.

ಕಾರ್ಯಕ್ರಮವನ್ನು ಎಲ್ಲ ತಾಯಂದಿರಿಂದ ಸಾಂಕೇತಿಕವಾಗಿ ತೊಟ್ಟಿಲನ್ನು ತೂಗುವ ಮೂಲಕ ಉದ್ಘಾಟಿಸಲಾಯಿತು. ತಾಯಂದಿರ ಪಾದ ಪೂಜೆ ಮಾಡಿ ಮಾತೃ ವಾತ್ಸಲ್ಯ ಮೆರೆದರು.

ಅಧ್ಯಕ್ಷತೆ ವಹಿಸಿದ ಶಕುಂತಲಾ ವೀರನಗೌಡ ಪಾಟೀಲ್ ಮಾತನಾಡಿದರು. ಎನ್ಎಸ್ಎಸ್ ಅಧಿಕಾರಿ ಎಂ.ಇ ವಿಶ್ವಕರ್ಮ, ರಾಜೇಶ್ವರಿ ಆಯಟ್ಟಿ, ಸಂತೋಷ್ ಮುಳ್ಳೂರ, ನೀಲಾಂಬಿಕ ಹೂಗಾರ, ಜ್ಯೋತಿ ಪಾರಿಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.