ನರಗುಂದ: ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ. ರೈತರು ಕೇವಲ ಕೃಷಿಯನ್ನು ಅವಲಂಬಿಸಿದರೆ ಆರ್ಥಿಕ ಸಬಲೀಕರಣ ಆಗದು. ಅದರ ಜೊತೆಗೆ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳತ್ತ ಗಮನಹರಿಸಬೇಕು. ರೈತರ ಕೃಷಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಬಾರದು ಎಂದು ಮಾಜಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ನಡೆದ ವಿಜಯ ಸೌಹಾರ್ದ ಸಹಕಾರಿ ಸಂಘದ 66ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೃಷಿಯಲ್ಲಿ ಏರಿಳಿತ ಸಹಜ. ಆಗ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಾಗ ಸುಧಾರಿತ ಜೀವನ ನಡೆಸಬೇಕು. ಪದವೀಧರ ಯುವಕರು ಕೃಷಿಯೊಂದಿಗೆ ಕೈಗಾರಿಕೆಯತ್ತ ಗಮನಹರಿಸಬೇಕು. ಸರ್ಕಾರದಿಂದ ಸಾಕಷ್ಟು ಯೋಜನೆಗಳಿವೆ. ಅವುಗಳ ಲಾಭ ಪಡೆದು ಮುಂದೆ ಬರಬೇಕು. ಪ್ರಧಾನಿ ಮೋದಿಯವರ ಸಮರ್ಥ ಆಡಳಿತದ ಪರಿಣಾಮ ಭಾರತ ವಿಶ್ವ ಐದನೇ ಆರ್ಥಿಕ ಶಕ್ತಿಯಾಗಿದೆ. ಬರುವ ವರ್ಷಗಳಲ್ಲಿ ಮೂರನೇ ಆರ್ಥಿಕ ಶಕ್ತಿ ಯಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದರು.
‘ನಮ್ಮ ಉದ್ಯಮ ಸಮೂಹದಿಂದ ಏಷ್ಯಾದಲ್ಲಿಯೇ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಲಾಗುತ್ತಿದೆ. ಭವಿಷ್ಯದ ಇಂಧನ ಕೊರತೆ ನೀಗಿಸಲು ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ನಮ್ಮ ಸಕ್ಕರೆ ಕಾರ್ಖಾನೆಗಳಿಂದ ನಿತ್ಯ ನಾಲ್ಕು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಪಿ.ಪಾಟೀಲ ಮಾತನಾಡಿದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಎಂ.ಎಚ್.ತಿಮ್ಮನಗೌಠ್ರ, ಎ.ಎಂ.ಹುಡೇದ, ಜೆ.ವಿ.ಕಂಠಿ, ಸಂಗನಗೌಡ ಪಾಟೀಲ, ಎಸ್.ಆರ್.ಪಾಟೀಲ, ಭೀಮಪ್ಪ ಕೊರಿಗಣ್ಣವರ, ಸಣ್ಣ ಗದಿಗೆಪ್ಪ ತಳವಾರ, ವಸಂತ ಜೋಗಣ್ಣವರ, ಮಲ್ಲಪ್ಪ ಮೇಟಿ, ಅಶೋಕ ಜ್ಯಾನೋಪಂಥ, ಮಂಜುನಾಥ್ ಆನೇಗುಂದಿ, ಸುನಿಲ್ ಶೆಲ್ಲಿಕೇರಿ, ಅಶೋಕ ಪತ್ರಿ, ಸಂಜೀವ ಜಾಧವ, ಸಂಘದ ಡಿಜಿಎಂ ವಿರುಪಾಕ್ಷಪ್ಪ ಪಲ್ಲಾಪುರ, ಸಿಜೆಎಂ ಎಂ.ಎಚ್.ಪತ್ತೆನ್ನವರ, ಗುರುನಾಥ್ ಕುಲಕರ್ಣಿ ಇದ್ದರು.
ಎಸ್.ಆರ್.ಪಾಟೀಲ ಸ್ವಾಗತಿಸಿದರು. ಆರ್.ಬಿ.ಚಿನಿವಾಲರ ನಿರೂಪಿಸಿದರು. ಗೊಳಸಂಗಿ ವಂದಿಸಿದರು.
ಶಾಸಕ ಸಿ.ಸಿ.ಪಾಟೀಲ ಮಾತನಾಡಿ ಸಾಲ ಕೊಡುತ್ತಾರೆಂದು ಸಾಲ ಮಾಡಬಾರದು. ಉತ್ಪಾದಕತೆ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಮಾಡಬೇಕು.ನಿರಾಣಿ ಸಾಧನೆ ನಮಗೆ ಸ್ಫೂರ್ತಿ ಸಿ.ಸಿ.ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.