ನರೇಗಲ್: ‘ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿ, ನಿಷ್ಠೆ, ಪರಾಕ್ರಮ, ವೈಜ್ಞಾನಿಕ ಆಲೋಚನೆ ಹೊಂದಿದ್ದ ಉತ್ತಮ ಆಡಳಿಗಾರ ಆಗಿದ್ದರು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಶಿ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಾಜಧಾನಿ ನಿರ್ಮಿಸಲು ಬೆಂಗಳೂರು ಪ್ರಶಸ್ತ ಸ್ಥಳವೆಂದು ಕೆಂಪೇಗೌಡರು ಆ ಕಾಲದಲ್ಲೇ ಯೋಚಿಸಿದ್ದರು. ಅದೇ ರೀತಿ ರಾಜಧಾನಿ ನಿರ್ಮಿಸಿದರು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆದಿರುವುದನ್ನು ನೋಡಿದರೆ ಕೆಂಪೇಗೌಡರ ದೂರದೃಷ್ಟಿ ಅರ್ಥವಾಗುತ್ತದೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.
ಕೆ.ಜಿ.ಎಸ್. ಸರ್ಕಾರಿ ಶಾಲೆ: ಇಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಬಸವರಾಜ ಕುರಿ, ‘ನಾಡಿನ ಜನರ ಒಳಿತಿಗಾಗಿ, ತಮ್ಮ ಸ್ವಾರ್ಥ ಬಿಟ್ಟು ಅನೇಕ ಜನಪರ ಕಾರ್ಯಗಳನ್ನು ಮಾಡಿದ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೌಡ’ ಎಂದರು.
‘ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಷ್ಟೇ ಅಲ್ಲದೆ ಉದ್ಯಾನ, ಶಿಕ್ಷಣ ಮೊದಲಾದ ರಂಗಗಳಲ್ಲಿ ಬೆಂಗಳೂರು ತನ್ನದೇ ಆದ ಹೆಸರು ಗಳಿಸಿದೆ. ಜನರು ಬದುಕಲು ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.
ಕೆ.ಜಿ.ಎಸ್. ಸರ್ಕಾರಿ ಶಾಲೆ: ಇಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಬಸವರಾಜ ಕುರಿ ‘ನಾಡಿನ ಜನರ ಒಳಿತಿಗಾಗಿ ತಮ್ಮ ಸ್ವಾರ್ಥ ಬಿಟ್ಟು ಅನೇಕ ಜನಪರ ಕಾರ್ಯಗಳನ್ನು ಮಾಡಿದ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೌಡ’ ಎಂದರು.
‘ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಷ್ಟೇ ಅಲ್ಲದೆ ಉದ್ಯಾನ ಶಿಕ್ಷಣ ಮೊದಲಾದ ರಂಗಗಳಲ್ಲಿ ಬೆಂಗಳೂರು ತನ್ನದೇ ಆದ ಹೆಸರು ಗಳಿಸಿದೆ. ಜನರು ಬದುಕಲು ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.