ADVERTISEMENT

ಮುಂಡರಗಿ: ನಮ್ಮೂರ ದಸಾರಾಕ್ಕೆ ಅನ್ನದಾನೀಶ್ವರ ಶ್ರೀ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 9:47 IST
Last Updated 11 ಅಕ್ಟೋಬರ್ 2018, 9:47 IST
ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜವು ಮುಂಡರಗಿಯ ಅಂಬಾ ಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ನಮ್ಮೂರ ದಸರಾ ಉತ್ಸವವನ್ನು ಡಾ.ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು
ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜವು ಮುಂಡರಗಿಯ ಅಂಬಾ ಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ನಮ್ಮೂರ ದಸರಾ ಉತ್ಸವವನ್ನು ಡಾ.ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು   

ಮುಂಡರಗಿ: ‘ನಮ್ಮ ದೇಹ ಹಾಗೂ ಮನಸ್ಸಿನಲ್ಲಿ ಅಡಗಿರುವ ದುಷ್ಟ ಗುಣಗಳನ್ನು ಸಂಹಾರ ಮಾಡುವ ಮೂಲಕದುರ್ಗಾಪೂಜೆ ಹಾಗೂ ನವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜವು ಬುಧವಾರ ರಾತ್ರಿ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ನಮ್ಮೂರ ದಸರಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳು ನಮ್ಮ ದೇಹ ಮತ್ತು ಮನಸ್ಸು ಆಕ್ರಮಿಸಿಕೊಂಡಿವೆ. ಅವುಗಳನ್ನು ನಿಯಂತ್ರಿಸಬೇಕಾಗಿದೆ. ಮನುಷ್ಯ ಸದಾ ಸತ್ಕಾರ್ಯದಲ್ಲಿ ತೊಡಗಿಕೊಂಡು ತನ್ನನ್ನು ತಾನು ಅರಿತುಕೊಂಡಾಗ ಮಾತ್ರ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಪ್ರವಚನಕಾರ ಡಾ.ಎಂ.ಬಿ.ಬೆಳವಟಗಿಮಠ ಮಾತನಾಡಿ, ‘ಮನುಷ್ಯ ನೈಜತೆ ಮರೆತು ಕೃತಕ ಜೀವನಕ್ಕೆ ಅಂಟಿಕೊಂಡಿದ್ದಾನೆ.ಸಹಜವಾದ ಉತ್ತಮ ಗುಣಗಳನ್ನು ಮರೆತು ಬದುಕತೊಡಗಿದ್ದಾನೆ. ನಗು ಇಂದು ನಮ್ಮಿಂದ ಮಾಯವಾಗುತ್ತಿದ್ದು, ನಾವೆಲ್ಲ ಒತ್ತಡದ ಜೀವನ ನಡೆಸುತ್ತಿದ್ದೇವೆ’ ಎಂದರು.

ಚನ್ನವೀರಯ್ಯ ಹಿರೇಮಠ ಹಾಗೂ ಮಹಾಲಿಂಗಸ್ವಾಮಿ ಹಿರೇಮಠ ಸಂಗೀತ ಸೇವೆ ನೀಡಿದರು. ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಅಧ್ಯಕ್ಷ ಅಶೋಕ ಸಿದ್ಧಲಿಂಗ ಅಧ್ಯಕ್ಷತೆ ವಹಿಸಿದ್ದರು.

ಬಿ.ಟಿ.ಹಾದಿಮನಿ, ಡಿ.ಜಿ.ಮಗಜಿ, ರಮೇಶ ಪವಾರ, ಗಣೇಶ ಮಗಜಿ, ರಾಘು ಹಾದಿಮನಿ, ವಿಜಯಬಸವ, ಶಂಕರ ಮಗಜಿ, ಕಾಶೀನಾಥ ಕಲಬುರ್ಗಿ, ವೆಂಕಟೇಶ ಬಾಕಳೆ, ಶ್ರೀನಿವಾಸ, ಎಸ್.ಆರ್.ಬಸಾಪೂರ, ಸೀತಾ ಬಸಾಪೂರ, ಗಣೇಶ ಕಬಾಡಿ, ಸುನಂದಾಬಾಯಿ ಮಗಜಿ, ಕೌಶಲ್ಯಾಬಾಯಿ ಸಿದ್ಧಲಿಂಗ, ರೇಣುಕಾ ಹಾದಿಮನಿ, ವಿದ್ಯಾ ಪವಾರ, ಉಮಾಬಾಯಿ ಬಾಕಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.