ನರೇಗಲ್: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶುಕ್ರವಾರವೂ ಜಿಟಿ,ಜಿಟಿ ಮಳೆ ಮುಂದುವರೆದಿದೆ. ಕಳೆದೆರಡು ದಿನಗಳಿಂದ ಆರಂಭವಾಗಿರುವ ಮಳೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಜೋರಾಗಿ ಸುರಿದಿದೆ.
ಬೆಳಿಗ್ಗೆಯಿಂದ ಜಿಟಿ,ಜಿಟಿಯಾಗಿದ್ದ ಮಳೆ ಸಂಜೆ ಎರಡು ತಾಸು ಜೋರಾಗಿ ಸುರಿದಿದೆ. ಇದರಿಂದ ಹೊಲವೆಲ್ಲವೂ ಹಸಿಯಾಗಿದ್ದು, ಮುಂಗಾರು ಬೆಳೆಗಳಿಗೆ ಬೇಕಿದ್ದ ನೀರು ಸಿಕ್ಕಂತಾಗಿದೆ. ಮಳೆಗಾಗಿ ಕಾಯುತ್ತಿದ್ದ ಕೃಷಿಕರು ಸಂತೋಷ ವ್ಯಕ್ತಪಡಿಸಿದರು.
ಸಂಜೆ ವೇಳೆ ಮಳೆ ರಭಸಕ್ಕೆ ವಿವಿಧ ಗ್ರಾಮಗಳಿಗೆ ಹೋಗಲು ವಿದ್ಯಾರ್ಥಿಗಳು, ನೌಕರರು ಪರದಾಡಿದರು. ಬಸ್ ನಿಲ್ದಾಣದ ವಿವಿಧೆಡೆ ಸೋರುತ್ತಿರುವ ಹಾಗೂ ಸ್ವಚ್ಚತೆ ಇಲ್ಲದಿರುವ ಕಾರಣ ಕುಳಿತುಕೊಳ್ಳಲು ಜಾಗವಿಲ್ಲದೇ ನಿಂತುಕೊಂಡೆ ಬಸ್‌ಗಾಗಿ ಕಾಯುತ್ತಿದ್ದರು. ಸ್ವಚ್ಛತೆ ಮಾಡಿಸದ ಬಸ್ ನಿಲ್ದಾಣದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.