ADVERTISEMENT

ಮೋದಿ ಪ್ರಮಾಣವಚನ: ಬಿಜೆಪಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 16:23 IST
Last Updated 9 ಜೂನ್ 2024, 16:23 IST
ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನಸ್ವೀಕರಿಸುತ್ತಿದ್ದಂತೆ ನರಗುಂದದ ಶಿವಾಜಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನಸ್ವೀಕರಿಸುತ್ತಿದ್ದಂತೆ ನರಗುಂದದ ಶಿವಾಜಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು   

ನರಗುಂದ: ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಶಿವಾಜಿ ವೃತ್ತದಲ್ಲಿ ಭಾನುವಾರ ಸಂಜೆ ಬಿಜೆಪಿ ಕಾರ್ಯಕರ್ತರು ಉಮೇಶಗೌಡ ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.

ಪಟಾಕಿ ಸಿಡಿಸಿ, ಸಿಹಿ ಹಂಚಿದ ಕಾರ್ಯಕರ್ತರು ಮೋದಿ ಪರ, ಬಿಜೆಪಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಉಮೇಶಗೌಡ ಪಾಟೀಲ ಮಾತನಾಡಿ, ‘ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಮೋದಿ ಮತ್ತೆ ಪ್ರಧಾನಿ ಆಗಿದ್ದು ಸಂತಸ ತಂದಿದೆ. ಇದು ಬರಿ ಬಿಜೆಪಿ ವಿಜಯೋತ್ಸವ ಅಲ್ಲ, ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಆಯ್ಕೆ ಮಾಡಿದ ಜನರ ವಿಜಯೋತ್ಸವ ಆಗಿದೆ’ ಎಂದರು.

ADVERTISEMENT

ವಸಂತ ಜೋಗಣ್ಣವರ ಮಾತನಾಡಿ, ‘ಬಿಟ್ಟಿ ಭಾಗ್ಯಗಳಿಂದ ಗೆಲ್ಲುತ್ತೇವೆಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನಾಯಕರನ್ನು ರಾಜ್ಯದ ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಸಿನ 135 ಶಾಸಕರ ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆಯಲ್ಲಿ ನೆಲಕಚ್ಚಿದೆ. ಮೊದಲು ದೇಶ ಎನ್ನುವುದನ್ನು ಜನ ತೋರಿಸಿಕೊಟ್ಟಿದ್ದಾರೆ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ಅಜ್ಜಪ್ಪ ಹುಡೇದ, ಸಂಗಪ್ಪ ಪೂಜಾರ, ಚಂದ್ರು ಪವಾರ, ಎಸ್.ಆರ್. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಮಹೇಶಗೌಡ ಪಾಟೀಲ, ಮಂಜು ಮೆಣಸಗಿ, ಅಜ್ಜನಗೌಡ ಪಾಟೀಲ, ರಾಚನಗೌಡ ಪಾಟೀಲ, ಮಹೇಶ ಹಟ್ಟಿ, ಉಮೇಶ ಯಳ್ಳೂರ, ಬಸವರಾಜ ಹುಲಕುಂದ, ವಿಠ್ಠಲ ಹವಾಲ್ದಾರ, ಪ್ರವೀಣ ಅಳಗವಾಡಿ, ಸಂತೋಷ ಹಂಚಿನಾಳ, ಸಿದ್ದು ಹೂಗಾರ, ಪ್ರವೀಣ ವಡ್ಡರ, ಹಸನ ನವದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.