ADVERTISEMENT

ನರಗುಂದ | ನಾಗದೇವತೆಗೆ ಹಾಲೆರೆದು ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:05 IST
Last Updated 30 ಜುಲೈ 2025, 7:05 IST
ನರಗುಂದದ ಹಾಲಭಾವಿ ಕೆರೆ ಓಣಿ ಭಕ್ತರು ಮಣ್ಣಿನ ನಾಗದೇವತೆ ನಿರ್ಮಿಸಿ ಪೂಜೆ ಸಲ್ಲಿಸಿ, ಹಾಲೆರೆದು ಸಂಭ್ರಮಿಸಿದರು 
ನರಗುಂದದ ಹಾಲಭಾವಿ ಕೆರೆ ಓಣಿ ಭಕ್ತರು ಮಣ್ಣಿನ ನಾಗದೇವತೆ ನಿರ್ಮಿಸಿ ಪೂಜೆ ಸಲ್ಲಿಸಿ, ಹಾಲೆರೆದು ಸಂಭ್ರಮಿಸಿದರು    

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು.

ಪಟ್ಟಣದಲ್ಲಿ ನಾಗರ ಪಂಚಮಿ ಮೂರನೇ ದಿನ ವಿಶೇಷವಾಗಿ ಆಚರಿಸಲಾಗುತ್ತದೆ. ಯುವಕರು ಮಣ್ಣಿನ ನಾಗದೇವತೆ ನಿರ್ಮಿಸುತ್ತಾರೆ. ಮೂರ್ತಿಗೆ ಮಹಿಳೆಯರು ಪೂಜೆ ಸಲ್ಲಿಸಿ, ಹಾಲೆರೆಯುತ್ತಾರೆ. ನಂತರ ಮಣ್ಣಿನ ನಾಗದೇವತೆ ಮುರಿದು ಪರಸ್ಪರ ಎರಚಿ ಸಂಭ್ರಮಿಸುತ್ತಾರೆ.

ಹಾಲಭಾವಿ ಕೆರೆ ದಂಡೆ ನಿವಾಸಿಗಳು ಬೃಹತ್ ಮಣ್ಣಿನ ನಾಗದೇವತೆ ನಿರ್ಮಿಸಿ ವಿಶೇಷ ಅಲಂಕಾರದಿಂದ ಪೂಜೆ ಸಲ್ಲಿಸಿದರು. ಪಂಚಮಿ ಸಂಭ್ರಮದಲ್ಲಿ ಮಹಿಳೆಯರು ಜೋಕಾಲಿ ಜೀಕಿದರು. ಚಿಣ್ಣರು ಉಂಡಿ ಸವಿದರು.

ADVERTISEMENT

ಭಕ್ತರ ದಂಡು: ಪಟ್ಟಣಕ್ಕೆ ಸಮೀಪದ ಅಮರಗೋಳದ ನಾಗಲಿಂಗಸ್ವಾಮಿ ಜಾತ್ರೆಗೆ ಪಟ್ಟಣದಿಂದ ಸಾವಿರಾರು ಭಕ್ತರ ಆಗಮಿಸಿದ್ದರು.

ನರಗುಂದದ ಹಾಲಭಾವಿ ಕೆರೆ ಓಣಿಯಲ್ಲಿ ಬೃಹತ್ ಮಣ್ಣಿನ ನಾಗದೇವತೆ ನಿರ್ಮಿಸಿ ವಿಶೇಷ ಅಲಂಕಾರದಿಂದ ಪೂಜೆ ಸಲ್ಲಿಸಿ ಹಾಲೆರೆದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.