ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ ನಿರಂತರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು.
ಪಟ್ಟಣದಲ್ಲಿ ಬುಧವಾರ ಸಂತೆ ದಿನವಾಗಿದ್ದರಿಂದ ಮಳೆಯ ನಡುವೆಯೆ ಸಂತೆ ವ್ಯಾಪಾರ ನಡೆಯಿತು. ಸಾರ್ವಜನಿಕರು ದಿನಸಿ ತರಕಾರಿ ಖರೀದಿಸಲು ಪರದಾಡಿದರು. ಹಳ್ಳಿಗಳಿಂದ ಬಂದ ರೈತರು ರಸ್ತೆ ಬದಿಯಲ್ಲಿ ನೆನೆದ ತರಕಾರಿ ಮಾರಾಟ ಮಾಡಿದರು. ಇದರಿಂದ ತರಕಾರಿಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುವಂತಾಯಿತು.
ಕೆಸರುಮಯವಾದ ರಸ್ತೆಗಳು: ಪಟ್ಟಣದ ಹೊಸ ಬಡಾವಣೆಗಳಲ್ಲಿ ಸರಿಯಾಗಿ ರಸ್ತೆ ನಿರ್ಮಾಣವಾಗದ ಕಾರಣ ರಸ್ತೆಗಳು ಕೆಸರಿನ ಹೊಂಡದಂತಾಗಿ ಸಂಚರಿಸಲು ತೀವ್ರ ಹರಸಾಹಸ ಪಡಬೇಕಾಯಿತು. ಪಟ್ಟಣದ ಕಸಬಾ ಚಾವಡಿ, ಉರ್ದು ಪ್ರೌಢ ಶಾಲೆ ಸಮೀಪ ರಸ್ತೆ, ಚರಂಡಿ ಕಾಮಗಾರಿ ನಡೆದಿದ್ದರಿಂದ ಮಳೆಯ ನಡುವೆ ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು.
ನಿರಂತರ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.