ನರಗುಂದ: ಸ್ವಾತಂತ್ರ್ಯದಿನ ತ್ಯಾಗ, ಬಲಿದಾನದ ಪ್ರತೀಕವಾಗಿದೆ. ಪ್ರತಿಯೊಬ್ಬರು ದೇಶಭಕ್ತಿ ಬೆಳೆಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ಲಯನ್ಸ್ ಶಿಕ್ಷಣ ಸಂಸ್ಥೆ ಚೇರ್ಮನ್, ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಲಯನ್ಸ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರ ಸಂಕೇತಗಳಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನವನ್ನು ಗೌರವಿಸಬೇಕು. ವಿವಿಧತೆಯಲ್ಲಿ ಏಕತೆ ಸಾಧಿಸಬೇಕು.ದೇಶಕ್ಕಾಗಿ ತನುಮನಧನ ಅರ್ಪಿಸಬೇಕು. ನಡೆನುಡಿ ಒಂದಾಗಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸಬೇಕು ಎಂದರು.
ವೇದಿಕೆಯಲ್ಲಿ ಕಾರ್ಯದರ್ಶಿಗಳಾದ ಜಿ.ಟಿ.ಗುಡಿಸಾಗರ, ನಿರ್ದೇಶಕರಾದ ಜಿ.ಬಿ.ಕುಲಕರ್ಣಿ, ಸಿ.ಎಸ್.ಸಾಲೂಟಗಿಮಠ, ಡಾ.ಪ್ರಭು ನಂದಿ, ವಿಜಯಕುಮಾರ ಬೇಲೇರಿ, ಮುಖ್ಯ ಶಿಕ್ಷಕ ಜಿ.ಬಿ.ಹಿರೇಮಠ, ಕೋಆರ್ಡಿನೇಟರ್ ಪ್ರೇರಣಾ ಪಾತ್ರಾ ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಇದ್ದರು. ಅಭಿನಯ ದೊಡಮನಿ ನಿರೂಪಿಸಿದರು. ಅಲೇಖಾ ಮೇಟಿ ವಂದಿಸಿದರು.
ಕೊಣ್ಣೂರಿನ ಕೆಇಎಸ್ ಶಾಲೆ: ತಾಲ್ಲೂಕಿನ ಕೊಣ್ಣೂರಿನ ಕೆ ಇ ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣ ವನ್ನು ಹಿರಿಯ ನಿರ್ದೇಶಕ ಎನ್. ಕೆ. ಸೋಮಾಪೂರ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಎಸ್. ಟಿ.ಚೌಡರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಪ್ರಗತಿಯಲ್ಲಿ ಎಲ್ಲರೂ ಕೈಜೋಡಿಸುವಂತೆ ಸಲಹೆ ಮಾಡಿದರು.
ಕಾರ್ಯದರ್ಶಿ . ಎಸ್. ಬಿ. ಯಲಿಗಾರ, ಪ್ರಾಚಾರ್ಯ. ಕೆ. ಎಮ್. ಮಾಕಣ್ಣವರ, ನಿರ್ದೇಶಕ ಆರ್. ಬಿ. ಅಣ್ಣಿಗೇರಿ, ದೈಹಿಕ ಉಪನ್ಯಾಸಕ ಹೆಚ. ಎಸ್. ಶಿವಪ್ಪಯ್ಯನಮಠ, ಬಿ. ಎಮ್. ಪಾಟೀಲ ಇದ್ದರು.
ಸೈನಿಕ ಶಂಕ್ರಪ್ಪ ಶಿವಪ್ಪ ವಾಲಿಯವರನ್ನು ಸನ್ಮಾನಿಸಲಾಯಿತು. ಎ. ಕೆ. ಬಂಡಗರ ಸ್ವಾಗತಿಸಿದರು. ಎಮ್. ಡಿ. ಚಲವಾದಿ ನಿರೂಪಿಸಿದರು. ಎಸ್. ಎಮ್. ಚವ್ಹಾಣ ವಂದಿಸಿದರು.
ಛಾಯಾಗ್ರಾಹಕ ಸಂಘ: ತಾಲ್ಲೂಕು ಛಾಯಾಗ್ರಾಹಕ ಸಂಘ ನರಗುಂದ ಇವರ ವತಿಯಿಂದ ಸ್ನೇಹಜೀವಿ ವೃದ್ಧಾಶ್ರಮದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಮಹೇಶ ಬಡಿಗೇರ್ ಉಪಾಧ್ಯಕ್ಷ ಅಂದಾನಯ್ಯ ಹಿರೇಮಠ ಕಾರ್ಯದರ್ಶಿ ನಜೀರ್ ರೋಣದ
ಛಾಯಾಗ್ರಾಹಕ ಸಂಘದ ಸದಸ್ಯರು, ವೃದ್ಧಾಶ್ರಮದ ಮುಖ್ಯಸ್ಥ ಶಶಿಧರ್ ಕುಮಾರ್ ಇದ್ದರು.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.