ನರೇಗಲ್: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶನಿವಾರವು ಭಾರಿ ಮಳೆಯಾಗಿದೆ. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು, ಸಂಜೆ 4:30 ಗಂಟೆಗೆ ಆರಂಭವಾದ ಮಳೆ ಎರಡು ತಾಸು ಜೋರಾಗಿ ಸುರಿದಿದೆ. ನಂತರ ಸ್ವಲ್ಪ ಹೊತ್ತಿನ ನಂತರ ಮತ್ತೇ ಬಿಟ್ಟುಬಿಡದೆ ಜೋರಾಗಿ ಸುರಿದಿದೆ. ಎಲ್ಲೆಡೆ ಹೊಲಗಳಲ್ಲಿ ನೀರು ತುಂಬಿದೆ.
ಗಡ್ಡಿ ಹಳ್ಳ, ಕಲ್ಲಹಳ್ಳ, ಮಾರನಬಸರಿ ಹಳ್ಳ, ಅಬ್ಬಿಗೇರಿ ಹಳ್ಳ, ಜಕ್ಕಲಿ ಅಗಸರ ಹಳ್ಳಿ, ಹಾಲಕೆರೆ ಹಳ್ಳ, ಹಾಗೂ ನಿಡಗುಂದಿ-ಸಂಕನೂರ ಕ್ರಾಸ್ ನಡುವಿನ ಹಳ್ಳ ಸೇರಿದಂತೆ ಇತರೆ ಕಡೆಯ ಹಳ್ಳಗಳು ತುಂಬಿಹರಿದಿವೆ. ಕೃಷಿ ಹೊಂಡಗಳಲ್ಲೂ ನೀರು ಹರಿದು ಬಂದಿದೆ. ಜಕ್ಕಲಿ ಮಾರ್ಗದ ಕಣಿವೆ, ತೋಟಗಂಟಿ ಕಣಿವೆ, ಜಕ್ಕಲಿ ಕಣಿವೆಗಳಲ್ಲಿ ನೀರು ಬಂದಿದೆ. ಹೊಲಗಳಲ್ಲಿ ನೀರಿನ ರಭಸಕ್ಕೆ ಬದುಗಳು ಒಡೆದು ಹೋಗಿವೆ. ಮುಂಗಾರು ಹಂಗಾಮಿನ ಹೆಸರು ಬೆಳೆ ನೀರಿನಲ್ಲಿ ನಿಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.