ADVERTISEMENT

ಗದಗ | ಡಾ. ಪ್ರಭಾಕರ ಕೋರೆ ಜನ್ಮದಿನಾಚರಣೆ: ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:37 IST
Last Updated 2 ಆಗಸ್ಟ್ 2025, 4:37 IST
ಗದಗ ನಗರದ ಕೆಎಲ್‌ಇ ವಿದ್ಯಾ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ಹಂಚಲಾಯಿತು
ಗದಗ ನಗರದ ಕೆಎಲ್‌ಇ ವಿದ್ಯಾ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ಹಂಚಲಾಯಿತು   

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ. ಪ್ರಭಾಕರ ಕೋರೆ ಅವರ 78ನೇ ಜನ್ಮದಿನಾಚರಣೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ಹಂಚುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಪ್ರಾಚಾರ್ಯ ಡಾ. ಎ.ಕೆ.ಮಠ ಮಾತನಾಡಿ, ‘ಕೋರೆಯವರು ಕೆಎಲ್‌ಇ ಸಂಸ್ಥೆಯ ಅಧಿಕಾರ ವಹಿಸಿಕೊಂಡಾಗ ಕೇವಲ 36 ಸಂಸ್ಥೆಗಳಿದ್ದು, ಪ್ರಸ್ತುತದಲ್ಲಿ 282 ಸಂಸ್ಥೆಗಳಿವೆ. ನರ್ಸರಿಯಿಂದ ಪಿಜಿಯವರೆಗೆ ಎಲ್ಲ ಕ್ಷೇತ್ರಗಳಲ್ಲೂ ಸಂಸ್ಥೆಗಳನ್ನು ಹುಟ್ಟುಹಾಕಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಹೆಚ್ಚಿಸಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ’ ಎಂದರು.

ಪ್ರೊ. ವೀಣಾ ಇ., ಎನ್.ಎಸ್.ಎಸ್ ಅಧಿಕಾರಿ ಪ್ರೊ. ವಾಗೀಶ ರೆಶ್ಮೆ, ಪ್ರೊ. ಅಂದಯ್ಯ ಅರವಟಗಿಮಠ, ಪ್ರೊ. ವಿಠ್ಠಲ ಕೋಳಿ, ಪ್ರೊ. ಗೌರಾ ಯಳಮಲಿ ಮತ್ತು ಪ್ರೊ. ಶ್ವೇತಾ ರಾಚಯ್ಯನವರ ಮತ್ತು ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಬೋಧಕ ಮತ್ತು ಭೋದಕೇತರ ಸಿಬ್ಬಂದಿ ಇದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.