
ಪ್ರಜಾವಾಣಿ ವಾರ್ತೆ
ಪ್ರಾತಿನಿಧಿಕ ಚಿತ್ರ
ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ವಿರಕ್ತಮಠದ 47ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಚೆನ್ನವೀರ ಸ್ವಾಮೀಜಿ ನೇತೃತ್ವದಲ್ಲಿ ಜನವರಿ 1ರಿಂದ 13ರವರೆಗೆ ಮಠದಲ್ಲಿ ಕೊಟ್ಟೂರು ಬಸವೇಶ್ವರ ಪುರಾಣ ಪ್ರವಚನ ನಡೆಯಲಿದೆ.
ರೊಟ್ಟಿಗವಾಡದ ರಾಚಯ್ಯ ಶಾಸ್ತ್ರಿಗಳು ಹಿರೇಮಠ ಪುರಾಣ ಪ್ರವಚನ ನೀಡಲಿದ್ದಾರೆ. ಗುಂಡುಗರ್ತಿಯ ನಿಂಗಯ್ಯಸ್ವಾಮಿ ಹಿರೇಮಠ ಹಾರ್ಮೋನಿಯಂ ಮತ್ತು ಕಟ್ಟಿಸಂಗಾವಿಯ ಶಿವಕುಮಾರ ತಬಲಾ ಸಾಥ್ ನೀಡುವರು. ಜ.13ರಂದು ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಜರುಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.